ವ್ಯಾಗ್ಬರ್‌ ಗ್ರೂಪ್‌ ಮುಖ್ಯಸ್ಥರ ಸಾವಿನ ಹಿಂದೆ ಪುಟಿನ್‌ ಕೈವಾಡ! ರಷ್ಯಾ ಹೇಳಿದ್ದೇನು?

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರ ವಿರುದ್ಧ ದಂಗೆಯೆದ್ದಿದ್ದ ಅಲ್ಲಿನ ಖಾಸಗಿ ಸೇನೆ ವ್ಯಾಗ್ನರ್‌ ಗ್ರೂಪ್‌ ಮುಖ್ಯಸ್ಥ ಯೆವ್ಗೆನಿ ಪ್ರಿಗೋಝಿನ್‌ ಅವ್ರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಜಾಗತಿಕ ನಾಯಕರು ಪ್ರಿಗೋಝಿನ್‌ರನ್ನ ರಷ್ಯಾ ಅಂದ್ರೆ ಪುಟಿನ್‌ ಅವ್ರೇ ಹತ್ಯೆ ಮಾಡಿದ್ದಾರೆ ಅಂತ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ಈ ಆರೋಪ ಶುದ್ಧ ಸುಳ್ಳು ಅಂತ ಹೇಳಿದೆ. ಈ ವಿಮಾನ ಅಪಘಾತದಲ್ಲಿ ಪ್ರಿಗೋಝಿನ್‌ ಸೇರಿದಂತೆ ವಿಮಾನದ ಪ್ರಯಾಣಿಕರ ದುರಂತ ಸಾವುಗಳ ಸುತ್ತ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಸಹಜವಾಗಿ ಈ ಊಹಾಪೋಹಗಳನ್ನ ಪಾಶ್ಚಿಮಾತ್ಯ ದೇಶಗಳು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ. ಆದ್ರೆ ಇದೆಲ್ಲೆವೂ ಸಂಪೂರ್ಣ ಸುಳ್ಳು ಹಾಗೂ ಈ ರೀತಿ ಸುಳ್ಳು ವಿಚಾರಗಳನ್ನ ಹರಡೋ ಬದಲು ತನಿಖೆಯ ಫಲಿತಾಂಶಕ್ಕಾಗಿ ಕಾಯೋದು ಮುಖ್ಯ ಅಂತ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ. ಇದೇ ವೇಳೆ ಇತ್ತೀಚಿನ ದಿನಗಳಲ್ಲಿ ಪುಟಿನ್‌ ಹಾಗೂ ಪ್ರಿಗೋಝಿನ್‌ ಇಬ್ಬರೂ ಪರಸ್ಪರ ಮೀಟ್‌ ಆಗಿಲ್ಲ ಅಂತ ಪೆಸ್ಕೋವ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply