ಪೋಲಿಸರೇ ಕಳ್ಳರು ಅಂದ ಬೆಂಗಳೂರಿಗರು: ಇಬ್ಬರು ಪೋಲಿಸರ ಅಮಾನತು!

masthmagaa.com:

ಹೊಯ್ಸಳ ಪೋಲಿಸರನ್ನೆ ಕಳ್ಳ ಕಳ್ಳ ಅಂತೇಳಿ ಸಾರ್ವಜನಿಕರು ಅಟ್ಟಾಡಿಸಿಕೊಂಡು ಹೋಗಿರೊ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೇ 17ರಂದು ರಾಜಗೋಪಾಲ ನಗರ ಪೋಲಿಸ್‌ ಠಾಣಾ ವ್ಯಾಪ್ತಿಯ ಪೀಣ್ಯ 2ನೇ ಹಂತದಲ್ಲಿ ಹೊಯ್ಸಳ ವಾಹನದಲ್ಲಿ ಬಂದು ಇಬ್ರು ಪೊಲೀಸರು ಜನರ ಬಳಿ ಹಣ ವಸೂಲಿ ಮಾಡುತ್ತಿದ್ದರು ಅಂತ ಆರೋಪ ಕೇಳಿ ಬಂದಿತ್ತು. ಈ ವಿಡಿಯೋ ಸೊಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ರಾಮಲಿಂಗಯ್ಯ ಮತ್ತು ಪ್ರಸನ್ನ ಕುಮಾರ್ ಅನ್ನೋರನ್ನ ಅಮಾನತು ಮಾಡಿ, ಬೆಂಗಳೂರು ಪೋಲಿಸ್‌ ಆಯುಕ್ತ ಬಿ.ದಯಾನಂದ್‌ ಆದೇಶ ಹೊರಡಿಸಿದ್ದಾರೆ.

-masthmagaa.com

Contact Us for Advertisement

Leave a Reply