ಅನೀಶ್ ಹುಟ್ಟುಹಬ್ಬಕ್ಕೆ ‘ಬೆಂಕಿ’ ಸಿನಿಮಾದ ಪೋಸ್ಟರ್ ರಿವೀಲ್!

masthmagaa.com:

ಚಂದನವನದ ಹೀರೋ ಅನೀಶ್ ತೇಜ್ವರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅನೀಶ್ ಜನುಮದಿನದ ಪ್ರಯುಕ್ತ ಅವರು ನಟಿಸಿ, ನಿರ್ಮಾಣ ಮಾಡಿರುವ 10ನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಅನೀಶ್ ಅಭಿನಯದ ಹೊಸ ಸಿನಿಮಾಗೆ “ಬೆಂಕಿ” ಎಂದು ಶೀರ್ಷಿಕೆ ಇಡಲಾಗಿದೆ. ಗಡ್ಡ ಮೀಸೆ ಬಿಟ್ಟು ಖಡಕ್ ಲುಕ್ ನಲ್ಲಿರುವ ಅನೀಶ್ ಇರುವ ಈ ಟೈಟಲ್ ಪೋಸ್ಟರ್ ಖಡಕ್ ಆಗಿದೆ.

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್‌. ಬಾಬು ಅವರ ಪುತ್ರ, ಶಾನ್‌ ಎಂಬವರು ಬೆಂಕಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ. ಈಗಾಗಲೇ ಸಿನಿಮಾದ ಶೇ. 80ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡು ಮತ್ತು ಒಂದಷ್ಟು ಟಾಕಿ ಭಾಗದ ಶೂಟಿಂಗ್‌ ಮಾತ್ರ ಬಾಕಿ ಇದೆ. ಅನೀಶ್ ಗೆ ಜೋಡಿಯಾಗಿ ರೈಡರ್ ಸಿನಿಮಾ ಖ್ಯಾತಿಯ ಸಂಪದ ನಟಿಸಿದ್ದು, ಶೃತಿ ಪಾಟೀಲ್, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಸೇರಿದಂತೆ ಅನುಭವಿ ಕಲಾ ಬಳಗ ಸಿನಿಮಾದಲ್ಲಿದ್ದೂ, ಕೌಶಿಕ್‌ ಹರ್ಷ ಸಂಗೀತ ಸಂಯೋಜನೆ, ವೀನಸ್‌ ನಾಗರಾಜ್‌ ಮೂರ್ತಿ ಕ್ಯಾಮೆರಾ ವರ್ಕ್ ಸಿನಿಮಾದಲ್ಲಿದೆ.

ಅಣ್ಣ ತಂಗಿ ಸೆಂಟಿಮೆಂಟ್‌ ಕಥೆ ಜೊತೆಗೆ ಹಳ್ಳಿ ಸೊಡಗಿನ ಕಂಪು ಚೆಲ್ಲುವ ಬೆಂಕಿ ಸಿನಿಮಾದ ಫಸ್ಟ್ ಲುಕ್ ಮಾಸ್ ಲುಕ್ ನಲ್ಲಿ ಮೂಡಿ ಬಂದಿದ್ದು, ಅನೀಶ್ ಸಿನಿಮಾ ಬದುಕಿನ ಹತ್ತನೇ ಸಿನಿಮಾವಾಗಿರುವ ಬೆಂಕಿ ಚಿತ್ರಕ್ಕೆ ಅನೀಶ್ ತಮ್ಮದೇ ವಿಂಕ್ ವಿಷಲ್ ಪ್ರೊಡಕ್ಷನ್ ನಡಿ ಬಂಡವಾಳ ಹೂಡಿದ್ದಾರೆ.

-masthmagaa.com

Contact Us for Advertisement

Leave a Reply