ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ವಿಧಿವಶ!

masthmagaa.com:

ಕನ್ನಡದ ಖ್ಯಾತ ನಿರ್ಮಾಪಕ ವೀರಸ್ವಾಮಿ‌ ಅವರ ಧರ್ಮಪತ್ನಿ ‌ಹಾಗೂ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಾಯಿ ಶ್ರೀಮತಿ ಪಟ್ಟಮ್ಮಾಳ್ ವೀರಸ್ವಾಮಿ‌ ಇಂದು ಬೆಳಗ್ಗೆ 6.30ರ ಸಮಯದಲ್ಲಿ ವಿಧಿವಶರಾಗಿದ್ದಾರೆ. 83 ವರ್ಷದ ಪಟ್ಟಮ್ಮಾಳ್ ಅವರು ವಾಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.

ಇವರಿಗೆ ರವಿಚಂದ್ರನ್, ಬಾಲಾಜಿ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳು.‌ಇಂದು ಬೆಳಗ್ಗೆ10.30 ರ ನಂತರ ರವಿಚಂದ್ರನ್ ಅವರ ಸ್ವಗೃಹದಲ್ಲಿ‌ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.

-masthmagaa.com

Contact Us for Advertisement

Leave a Reply