ಪಾಕಿಸ್ತಾನದಲ್ಲಿ ಒಂದು ತುತ್ತು ಅನ್ನಕ್ಕೂ ಆಹಾಕಾರ ಉಂಟಾಗಲಿದೆ: ವಿಶ್ವಸಂಸ್ಥೆ

masthmagaa.com:

ರಾಜಕೀಯ ಅಸ್ಥಿರತೆ, ಹಣದುಬ್ಬರ ಸೇರಿದಂತೆ ಆರ್ಥಿಕ ಬಿಕ್ಕಟ್ಟು, ಭಯೋತ್ಪಾದನೆ ಹೀಗೆ ಹತ್ತಾರು ಸಮಸ್ಯೆಗಳನ್ನ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಒಂದೊತ್ತಿನ ಊಟಕ್ಕೂ ಪಾಕಿಸ್ತಾನದ ಜನತೆ ಕಷ್ಟಪಡ್ತಿದಾರೆ. ಆದ್ರೆ ಪಾಕಿಸ್ತಾನದಲ್ಲಿ ಇದೇ ರೀತಿ ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಕಿತ್ತಾಟ ಮುಂದುವರೆದ್ರೆ ಮುಂದಿನ ತಿಂಗಳುಗಳಲ್ಲಿ ತೀವ್ರ ಆಹಾರ ಅಭದ್ರತೆ ಉಂಟಾಗಲಿದೆ ಅಂತ ವಿಶ್ವಸಂಸ್ಥೆ ಎಚ್ಚರಿಸಿದೆ. ಈ ಕುರಿತು ನೂತನ ವರದಿ ಒಂದನ್ನ ‘Hunger Hotspots: FAO-WFP Early Warnings on Severe Food Insecurity’ ಅನ್ನೊ ಟೈಟಲ್‌ನಲ್ಲಿ FAO ಹಾಗೂ WFP ಜಂಟಿಯಾಗಿ ತಯಾರಿಸಿವೆ. ಪ್ರಸ್ತುತ ಜಾಗತಿಕವಾಗಿ ಆರ್ಥಿಕ ಕುಸಿತ ಉಂಟಾಗ್ತಿರುವ ನಡುವೆಯೇ ಪಾಕಿಸ್ತಾನದ ಸಾಲ ಕೂಡ ಜಾಸ್ತಿಯಾಗ್ತಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ತಿದೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ ಏಪ್ರಿಲ್ 2023 ಮತ್ತು ಜೂನ್ 2026ರ ಒಳಗೆ ಪಾಕಿಸ್ತಾನ 77.5 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 6.35 ಲಕ್ಷ ಕೋಟಿ ರೂಪಾಯಿ ಸಾಲವನ್ನ ಮರುಪಾವತಿ ಮಾಡ್ಬೇಕು ಅಂತ ಸಲಹೆ ನೀಡಲಾಗಿದೆ. ಇದೇ ವೇಳೆ ವರದಿ ಪ್ರಕಾರ ಪಾಕಿಸ್ತಾನದಲ್ಲಿ ನಡೆಯಲಿರುವ ಅಕ್ಟೋಬರ್ 2023ರ ರಾಷ್ಟ್ರೀಯ ಚುನಾವಣೆಯ ಸಂದರ್ಭದಲ್ಲಿ ಇನ್ನಷ್ಟು ರಾಜಕೀಯ ಬಿಕ್ಕಟ್ಟು ಮತ್ತು ನಾಗರಿಕ ಅಶಾಂತಿ ಜಾಸ್ತಿಯಾಗಲಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ಈ ಎಲ್ಲ ಕಾರಣಗಳಿಂದ ಆಹಾರ ಮತ್ತು ಇತರ ಉತ್ಪನ್ನಗಳನ್ನ ಖರೀದಿ ಮಾಡುವಲ್ಲಿ ಪಾಕಿಸ್ತಾನ ವಿಫಲವಾಗಲಿದ್ದು, ಆಹಾರ ಅಭದ್ರತೆ ಹಾಗೂ ಅಪೌಷ್ಟಿಕತೆ ಸಮಸ್ಯೆ ತೀವ್ರಗೊಳ್ಳಲಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply