ಭಾರತ ನೇವಿಯಲ್ಲಿ ಅದಾನಿ ಗ್ರೂಪ್‌ ತಯಾರಿಸಿದ ಡ್ರೋನ್‌ ಸೇರ್ಪಡೆ!

masthmagaa.com:

ಭಾರತದ ಬಂದರು, ಏರ್‌ಪೋರ್ಟ್‌ಗಳನ್ನ ನಿರ್ವಹಿಸುತ್ತಿರೋ ಅದಾನಿ ಈಗ ಭಾರತದ ರಕ್ಷಣಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಭಾರತೀಯ ನೌಕಾ ಪಡೆಗೆ ಇದೀಗ ದೇಶೀಯ ನಿರ್ಮಿತ ʻದೃಷ್ಟಿ 10 ಸ್ಟಾರ್‌ಲೈನ್‌ʼ ಡ್ರೋನ್‌ ಸೇರ್ಪಡೆಯಾಗಿದೆ. ಅದಾನಿ ಡಿಫೆನ್ಸ್‌ & ಏರೋಸ್ಪೇಸ್‌ ತಯಾರಿಸಿದ ಈ ಹೊಸ ಡ್ರೋನ್‌ ಹೈದರಾಬಾದ್‌ನಲ್ಲಿ ಉದ್ಘಾಟನೆಗೊಂಡಿದೆ. ಇದನ್ನ ಭಾರತೀಯ ನೌಕಾಪಡೆಯ ಚೀಫ್‌ ಅಡ್ಮಿರಲ್‌ ಆರ್‌ ಹರಿ ಕುಮಾರ್‌ ಲಾಂಚ್‌ ಮಾಡಿದ್ದಾರೆ. ಅಂದ್ಹಾಗೆ ದೃಷ್ಟಿ 10 ಸ್ಟಾರ್‌ಲೈನ್‌ ಡ್ರೋನ್‌ ಸತತವಾಗಿ 36 ಗಂಟೆಗಳ ಕಾಲ ಹಾರಾಟ ನಡೆಸೋ ಶಕ್ತಿ ಹೊಂದಿದೆ. ಅಲ್ಲದೆ 450 ಕೆಜಿ ಪೇಲೋಡ್‌ ಹೊತ್ತೊಯ್ಯೋ ಸಾಮರ್ಥ್ಯ ಕೂಡ ಇದೆ. ಇದನ್ನ ಗುಜರಾತ್‌ನ ಪೋರ್‌ಬಂದರ್‌ನ ನೌಕಾ ಸಮುದ್ರ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply