ತೆಲಂಗಾಣದಲ್ಲಿ ಅದಾನಿ ಗ್ರೂಪ್‌ ಹೊಸ ಯೋಜನೆ! ಕ್ಷಿಪಣಿ ತಯಾರಿಕೆ?

masthmagaa.com:

ಹೊಸ ವರ್ಷದಲ್ಲಿ ಅದಾನಿ ಸಮೂಹದ ಚೇರ್‌ಪರ್ಸನ್‌ ಗೌತಮ್‌ ಅದಾನಿಗೆ ಒಂದಾದ್ಮೇಲೊಂದು ಹೊಸ ಗುಡ್‌ ನ್ಯೂಸ್‌ಗಳು ಬರ್ತಿವೆ. ಮೊದ್ಲು ಹಿಂಡನ್‌ಬರ್ಗ್‌ ಕೇಸ್‌ ವಿಚಾರಣೆ ವಿಷಯವಾಗಿ ಸುಪ್ರೀಂ ಕೋರ್ಟ್‌ ಸೆಬಿ ತನಿಖೆಯಲ್ಲಿ ತಲೆ ಹಾಕಲ್ಲ ಅಂತ ಹೇಳ್ತು. ಇದ್ರ ಬೆನ್ನಲ್ಲೇ ಅದಾನಿ ಷೇರುಗಳು ಗೂಳಿ ಓಟ ನಡೆಸಿದ್ವು. ಇದೀಗ ಅದಾನಿ ಸಮೂಹ ತನ್ನ ಡಿಫೆನ್ಸ್‌ ಕಂಪನಿ ಅದಾನಿ ಡಿಫೆನ್ಸ್‌ & ಏರೋಸ್ಪೇಸ್‌ ಕಂಪನಿಯ ಆಪರೇಶನ್‌ಗಳನ್ನ ಎಕ್ಸ್‌ಪ್ಯಾಂಡ್‌ ಮಾಡೋಕೆ ಮುಂದಾಗಿದೆ. ಇಷ್ಟು ದಿನ ಅದಾನಿ ಡಿಫೆನ್ಸ್‌, ಹರ್ಮ್ಸ್‌ 900 ನಂತ ಡ್ರೋನ್‌ ಅಥವಾ Unmanned Aerial Vehicles (UAV)ಗಳು, Tavor TAR-21 ನಂತ ಗನ್‌, ಮುಂತಾದ ಸಣ್ಣ ಪ್ರಮಾಣದ ಆಯುಧಗಳನ್ನ ನಿರ್ಮಿಸುತ್ತಿತ್ತು. ಭಾರತದ ಸಣ್ಣ ಪುಟ್ಟ ಡಿಫೆನ್ಸ್‌ MSME ಗಳ ಜೊತೆ ಕೊಲ್ಯಾಬೊರೇಟ್‌ ಮಾಡಿ, ಸಣ್ಣ ಪ್ರಮಾಣದ ಯುದ್ದೋಪಕರಣಗಳ್ನ ಮ್ಯಾನುಫ್ಯಾಕ್ಚರ್‌ ಮಾಡ್ತಿತ್ತು. ಆದ್ರೆ ಇದೀಗ ಅತ್ಯಾಧುನಿಕ ಮಿಸೈಲ್‌ಗಳನ್ನ ತಯಾರಿಸೋಕೆ ಅದಾನಿ ಡಿಫೆನ್ಸ್‌ ಸ್ಕೆಚ್‌ ಹಾಕಿದೆ. ಅಂದ್ಹಾಗೆ ಹೈದ್ರಾಬಾದ್‌ನಲ್ಲಿ ಈಗಾಗ್ಲೆ ಇಸ್ರೇಲ್‌ನ ಎಲ್ಬಿಟ್‌ ಸಿಸ್ಟಮ್ಸ್‌ ಸಹಯೋಗದಲ್ಲಿ ಅದಾನಿ ಡಿಫೆನ್ಸ್‌, UAV ಗಳನ್ನ ತಯಾರಿಸ್ತಿದೆ. ಇದೀಗ ಮತ್ತೇ ಹೈದ್ರಾಬಾದ್‌ನಲ್ಲೇ ಮಿಸೈಲ್‌ ಸಿಸ್ಟಮ್‌ಗಳನ್ನ ತಯಾರಿಸೋಕೆ ಮುಂದಾಗಿದೆ. ಜೊತೆಗೆ ಕೌಂಟರ್‌ ಡ್ರೋನ್‌ ಸಿಸ್ಟಮ್‌ಗಳನ್ನ ತಯಾರಿಸಲು ಯೋಜನೆ ಹೂಡಿದೆ. ಇನ್ನು ಇತ್ತೀಚೆಗೆ ಅದಾನಿ ಡಿಫೆನ್ಸ್‌ ಹಾಗೂ ಏರೋಸ್ಪೇಸ್‌ನ CEO ಆಶಿಶ್‌ ರಾಜವಂಶಿ ಹಾಗೂ ಗೌತಮ್‌ ಅದಾನಿ ಪುತ್ರ ಕರಣ್ ಅದಾನಿ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವ್ರನ್ನ ಭೇಟಿ ಮಾಡಿದ್ರು.‌ ಈ ವೇಳೆ ರಕ್ಷಣಾ ಉಪಕರಣಗಳ ಜೊತೆಗೆ ಜಲವಿದ್ಯುತ್‌ ಹಾಗೂ ವಿಂಡ್‌ ಎನರ್ಜಿ ಯೋಜನೆಗಳನ್ನ ಶುರು ಮಾಡೋ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿಎಂ ರೇವಂತ್‌ ರೆಡ್ಡಿ, ಅದಾನಿ ಗ್ರೂಪ್‌ನ ಹೊಸ ಉದ್ಯಮಕ್ಕೆ ಬೇಕಾಗಿರೋ ಮೂಲಸೌಕರ್ಯ, ಸೌಲಭ್ಯಗಳು ಹಾಗೂ ಸಬ್ಸಿಡಿಗಳನ್ನ ನೀಡ್ತೀವಿ ಅಂತ ಹೇಳಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply