ಅದಾನಿ ಗ್ರೂಪ್ಸ್‌ನಿಂದ ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದಕ ಘಟಕ!

masthmagaa.com:

ಅದಾನಿ ಗ್ರೂಪ್ಸ್‌ನ ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದಕ ಘಟಕ ʻಕಚ್‌ ಕಾಪರ್‌ ಲಿಮಿಟೆಡ್‌ʼನಲ್ಲಿ ತಾಮ್ರ ತಯಾರಿಕೆಗೆ ಎಲ್ಲಾ ರೀತಿಯ ತಯಾರಿಗಳು ನಡೀತಿವೆ. ಇದೀಗ ಪ್ರತೀ ವರ್ಷ 1.6 ಮಿಲಿಯನ್‌ ಟನ್‌ ಅಂದ್ರೆ 16 ಲಕ್ಷ ಟನ್‌ಗಳಷ್ಟು ತಾಮ್ರ ಸಾಂಧ್ರೀಕರಣವನ್ನ ಖರೀದಿಸೋಕೆ ಅದಾನಿ ಗ್ರೂಪ್‌ ಮುಂದಾಗಿದೆ. ಇದಕ್ಕೆ ಒಪ್ಪಂದ ಮಾಡ್ಕೊಂಡು ಸೈನ್‌ ಕೂಡ ಹಾಕಿದೆ. ಅಂದ್ಹಾಗೆ ಈ ನೂತನ ತಾಮ್ರ ತಯಾರಿಕಾ ಘಟಕ ಅಥ್ವಾ ಕಾಪರ್‌ ಪ್ಲಾಂಟ್‌ ಮುಂದಿನ ತಿಂಗಳು ಮಾರ್ಚ್‌ನಲ್ಲಿ ಕಾರ್ಯಚರಿಸೋದನ್ನ ಸ್ಟಾರ್ಟ್‌ ಮಾಡಲಿದೆ. ಇನ್ನು ಈ ಘಟಕ ಇರೋದು ಗುಜರಾತ್‌ನ ಮುಂದ್ರಾ ನಗರದಲ್ಲಿ.

-masthmagaa.com

Contact Us for Advertisement

Leave a Reply