ಹೂಡಿಕೆದಾರರ ರಕ್ಷಣೆಗಾಗಿ ಸೆಬಿಗೆ ನಿರ್ದೇಶನ: ಸುಪ್ರೀಂ ಕೋರ್ಟ್

masthmagaa.com:

ಅದಾನಿ ಹಿಂಡನ್‌ಬರ್ಗ್‌ ಕೇಸ್‌ ವಿಚಾರವಾಗಿ ಸೆಕ್ಯುರಿಟೀಸ್‌ ಅಂಡ್ ಎಕ್ಸ್‌ಚೇಂಜ್‌ ಬೋರ್ಡ್(‌SEBI) ತನಿಖೆ ಡಿಲೇ ಆಗಿದೆ ಅಂತ ಸುಪ್ರೀಂ ಕೋರ್ಟ್‌ಗೆ ವ್ಯಕ್ತಿಯೊಬ್ರು ಅರ್ಜಿ ಸಲ್ಲಿಸಿದ್ರು. ಈ ಸುಪ್ರೀಂಕೋರ್ಟ್‌ ಇಂದು ವಿಚಾರಣೆ ನಡೆಸಿದೆ. ಈ ವೇಳೆ ” ಈ ಕೇಸ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಈಗಾಗಲೇ ರಚಿಸಿರೋ ತಜ್ಞರ ಮೂಲಕವೇ ಸೆಬಿಗೆ ಕೆಲವು ನಿರ್ದೇಶನ ನೀಡುತ್ತೆ. ಅಲ್ದೆ ಕೋರ್ಟ್‌ ಈ ಕೇಸ್‌ನಲ್ಲಿ ಪ್ರವೇಶ ಮಾಡಿದ್ದು ಈಗಿರೋ ನಿಯಮಗಳು ಹೂಡಿಕೆದಾರರಿಕೆ ನಷ್ಟವಾಗದಂತೆ ತಡೆಯುತ್ವಾ ಅನ್ನೋದನ್ನ ಖಚಿತಪಡಿಸಿಕೊಳ್ಳೋಕೆ ಅಷ್ಟೆ” ಅಂತ ಸುಪ್ರೀಂ ಕೋರ್ಟ್‌ ಹೇಳಿದೆ. ಈ ವಿಚಾರಣೆಯಲ್ಲಿ ಸೆಬಿ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದ್ದಾರೆ. “ಅದಾನಿ ಸಮೂಹದ ಬಗ್ಗೆ ಹಿಂಡನ್‌ಬರ್ಗ್‌ ವರದಿ ಆಧರಿಸಿ 24 ಕೇಸ್ಗಳನ್ನು ಗುರುತಿಸಲಾಗಿದೆ. ಇದರಲ್ಲಿ 22 ಕೇಸ್‌ಗಳ ತನಿಖೆ ಮುಗಿದಿದ್ದು, ಉಳಿದೆರಡು ಕೇಸ್‌ಗಳ ಬಗ್ಗೆ ಸೆಬಿ ರೀತಿಯ ಅಂತಾರಾಷ್ಟ್ರೀಯ ನಿಯಂತ್ರಕ ಸಂಸ್ಥೆಗಳು ವರದಿ ನೀಡೋದು ಬಾಕಿಯಿದೆ. ಈ ವರದಿಗಳು ಸಿಗೋಕೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ ಅಷ್ಟೆ.” ಅಂದಿದ್ದಾರೆ.

-masthmagaa.com

Contact Us for Advertisement

Leave a Reply