ACC, ಅಂಬುಜಾ ಬಳಿಕ ಅದಾನಿ ತೆಕ್ಕೆಗೆ ಮತ್ತೊಂದು ಸಿಮೆಂಟ್‌ ಕಂಪನಿ!

masthmagaa.com:

ವಾಪಸ್‌ ಪಟ್ಟಕ್ಕೇ ಬಂದಿರೋ ಏಷ್ಯಾದ ನಂ.1 ಶ್ರೀಮಂತ ಅದಾನಿ ಈಗ ಮತ್ತೊಂದು ಸಿಮೆಂಟ್‌ ಕಂಪನಿಯನ್ನ ಸ್ವಾಧೀನ ಪಡಿಸ್ಕೊಂಡಿದ್ದಾರೆ. ಅದಾನಿ ಒಡೆತನದಲ್ಲಿರೋ ACC ಸಿಮೆಂಟ್‌, ACCPL ಏಷ್ಯನ್‌ ಕಾಂಕ್ರೀಟ್ಸ್‌ ಅಂಡ್‌ ಸಿಮೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಅನ್ನೋ ಕಂಪನಿಯನ್ನ ಸಂಪೂರ್ಣ ಅಕ್ವೈರ್‌ ಮಾಡ್ಕೊಂಡಿದ್ದಾರೆ. ಅಂದ್ಹಾಗೆ ಈ ಕಂಪನಿಯಲ್ಲಿ ಈಗಾಗಲೇ ಅದಾನಿ ಸಮೂಹ 45% ಪಾಲುದಾರಿಕೆಯನ್ನ ಹೊಂದಿತ್ತು. ಇದೀಗ ಉಳಿದ 55% ಷೇರುಗಳನ್ನ 425.96 ಕೋಟಿಗಳಿಗೆ ಖರೀದಿ ಮಾಡಿದ್ದಾರೆ. ಈ ಮೂಲಕ ಒಟ್ಟಾರೆ ಕಂಪನಿಯನ್ನ ಅದಾನಿ 775 ಕೋಟಿಗೆ ಖರೀದಿ ಮಾಡಿದಂತೆ ಆಗಿದೆ. ಅಂದ್ಹಾಗೆ ACCPL ಹಿಮಾಚಲದ ನಾಲಗಢದಲ್ಲಿ 1.3MTPA ಅಂದ್ರೆ ವರ್ಷಕ್ಕೆ 1.3 ಮಿಲಿಯನ್‌ ಟನ್‌ ಸಿಮೆಂಟ್‌ ತಯಾರಿಸುವ ಘಟಕ ಹೊಂದಿದೆ. ಅದ್ರ ಸಬ್ಸಿಡರಿ ಏಷ್ಯನ್‌ ಫೈನ್‌ ಸಿಮೆಂಟ್ಸ್‌ ಪಂಜಾಬ್‌ನ ರಾಜಪುರದಲ್ಲಿ 1.5 MTPA ಸಾಮರ್ಥ್ಯದ ಫ್ಯಾಕ್ಟರಿ ಹೊಂದಿದೆ. ಈಗಾಗಲೇ ACCನೇ ಅದಾನಿಯವ್ರ ಅಂಬುಜಾ ಸಿಮೆಂಟ್‌ ಕಂಪನಿಯ ಉಪಕಂಪನಿ, ಈಗ ಆ ACCಗೆ ಮತ್ತೊಂದು ಉಪಕಂಪನಿ ಆದಂತೆ ಆಗಿದೆ. ಹೀಗಾಗಿ ACCಯ ಸಿಮೆಂಟ್‌ ಉತ್ಪಾದನೆ ಸಾಮರ್ಥ್ಯ 38.55 MTPA ಆದ್ರೆ, ಒಟ್ಟಾರೆ ಅದಾನಿ ಸಮೂಹದ ಸಾಮರ್ಥ್ಯ 77.4 MTPA ಆಗಿದೆ. ಅಂದ್ರೆ ಅದಾನಿ ಸಮೂಹ ವರ್ಷಕ್ಕೆ 77.4 ಮಿಲಿಯನ್‌ ಟನ್‌ ಸಿಮೆಂಟ್‌ ಉತ್ಪಾದಿಸಬಲ್ಲದಾಗಿದೆ.

-masthmagaa.com

Contact Us for Advertisement

Leave a Reply