ದೇಶಾದ್ಯಂತ CNG ‍‍& PNG ದರದಲ್ಲಿ ಇಳಿಕೆ!

masthmagaa.com:

ನೈಸರ್ಗಿಕ ಅನಿಲ ಉತ್ಪನ್ನಗಳಾಗಿರೊ CNG (Compressed Natural Gas) ಹಾಗೂ PNG (Piped natural Gas)ಗಳ ಬೆಲೆಗಳು ದೇಶಾದ್ಯಂತ ಕಡಿಮೆ ಆಗಿವೆ. ನ್ಯಾಚುರಲ್‌ ಗ್ಯಾಸ್‌ನ ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಸೂಚಿಸಿರೊ ಹೊಸ ಮಾರ್ಗಸೂಚಿಗಳಿಗೆ ನಿನ್ನೆ ಕೇಂದ್ರ ಸಂಪುಟ ಅನುಮೋದನೆ ಕೊಟ್ಟಿದೆ. ಇದರ ಬೆನ್ನಲ್ಲೇ ಇಂದು ದೇಶದ ವಿವಿಧ ಕಡೆ ಬೇರೆ ಬೇರೆ ಪ್ರಮಾಣದಲ್ಲಿ ಗ್ಯಾಸ್‌ ಬೆಲೆಗಳು ಇಳಿಕೆ ಕಂಡಿವೆ. CNG ಬೆಲೆಯಲ್ಲಿ 6 ರಿಂದ ಶೇ.9 ರಷ್ಟು ಇಳಿಕೆ ಕಂಡಿದ್ರೆ, PNG ಬೆಲೆಯಲ್ಲಿ ಶೇ.10ರಷ್ಟು ಕಡಿಮೆ ಆಗಿದೆ. ಈ ಮೂಲಕ ಬೆಲೆ ಏರಿಕೆಯ ಬಿಸಿಯಲ್ಲಿ ಜನಸಮಾನ್ಯರಿಗೆ ಸ್ವಲ್ಪ ಹೆಲ್ಪ್‌ ಆದಂತಾಗಿದೆ. ಇತ್ತ ಸರ್ಕಾರದ ಮಾರ್ಗಸೂಚಿಯನ್ನ ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌ ಸ್ವಾಗತಿಸಿದ್ದು, ಪ್ರತಿ 1 ಕೆಜಿ CNG ದರದಲ್ಲಿ 8.13 ರೂಪಾಯಿಯನ್ನ ಹಾಗೂ ಪ್ರತಿ ಕ್ಯುಬಿಕ್‌ ಮೀಟರ್‌ PNG ದರದಲ್ಲಿ 5.06 ರೂಪಾಯಿಯನ್ನ ಕಡಿಮೆ ಮಾಡಿದೆ.

-masthmagaa.com

Contact Us for Advertisement

Leave a Reply