ಕ್ಯಾಮೆರಾ ನೋಡಿ ನನ್ ಮದುವೆ ಅಂತ ಅನ್ನಿಸ್ತಿದೆ ಅಂದಿದ್ದ ಅದಿತಿ ಪ್ರಭುದೇವ!

masthmagaa.com:

ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರ ನಿಶ್ಚಿತಾರ್ಥ ನೆರವೇರಿದೆ. ಹುಡುಗನೊಬ್ಬನ ಜೊತೆಗೆ ಇರುವ ಒಂದು ಫೋಟೋವನ್ನ ನಿನ್ನೆ ತಮ್ಮ ಇನ್ಸ್ಟಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಅದಿತಿ ‘ಕನಸೊಂದು ಕನಸಿನಂತೆ ನನಸಾಯಿತು’ ಅಂತ ಆ ಪೋಸ್ಟ್ ಗೆ ಇಂಗ್ಲಿಷ್ನಲ್ಲಿ ಕ್ಯಾಪ್ಷನ್ ನೀಡಿದ್ದಾರೆ. ಅದಿತಿ ಎಂಗೇಜ್ ಆಗಿರುವ ಹುಡುಗ ದಾವಣಗೆರೆ ಮೂಲದ ಉದ್ಯಮಿ ಎಂದು ಹೇಳಲಾಗುತ್ತಿದೆ. ಈ ಫೋಟೋಗೆ ಅಭಿಮಾನಿಗಳು ಮತ್ತು ಕೆಲ್ವ ಆಪ್ತರು ‘ಕಂಗ್ರಾಜುಲೇಷನ್ಸ್‌’ ಎಂದು ಶುಭ ಹಾರೈಸಿ ಕಾಮೆಂಟ್ ಮಾಡಿದ್ದಾರೆ.

ಅದಿತಿ ಅವರ ಜೊತೆಗೆ ಇರುವ ಹುಡುಗ ಯಾರು ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಅದಿತಿ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಮೂಲಗಳ ಪ್ರಕಾರ, ಅದಿತಿ ಜೊತೆಗೆ ಇರುವ ಹುಡುಗ ದಾವಣಗೆರೆ ಮೂಲದವರು ಎನ್ನಲಾಗಿದೆ. ಅಲ್ಲದೆ, ಅದಿತಿ ಪ್ರಭುದೇವ ಕೂಡ ದಾವಣಗೆರೆ ಮೂಲದವರು ಎಂಬುದು ಗಮನಿಸಬೇಕಾದ ಅಂಶ. ಡಿ.26ರ ಭಾನುವಾರ ಎಂಗೇಜ್‌ಮೆಂಟ್ ಆಗಿದ್ದು, ಕೆಲವೇ ಕೆಲವು ಮಂದಿ ಮಾತ್ರ ಹಾಜರಿದ್ದರು ಎಂಬ ಮಾಹಿತಿ ಕೂಡ ಸಿಕ್ಕಿದೆ. ಸಧ್ಯಕ್ಕೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಕೆಲ ದಿನಗಳ ಹಿಂದಷ್ಟೇ ತಮ್ಮ ಹೊಸ ಚಿತ್ರ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ನಲ್ಲಿ ಸುದ್ದಿಗೋಷ್ಠಿ ನಡೆಯಿತು. ಆ ಸಂದರ್ಭದಲ್ಲಿ ಹಲವಾರು ಕ್ಯಾಮೆರಾಗಳನ್ನ ನೋಡಿ, “ಏನ್ ಇಷ್ಟೊಂದು ಕ್ಯಾಮೆರಾ, ನನ್ ಮದುವೆ ಏನಾದ್ರೂ ಫಿಕ್ಸ್ ಆಯಿತ!?” ಅಂತ ಕೇಳಿದ್ದರು. ಈ ವಿಡಿಯೋದ ಲಿಂಕ್ ಕೆಳಗಿದೆ.

-masthmagaa.com.

Contact Us for Advertisement

Leave a Reply