ಕೆಂಪು ಸಮುದ್ರ ಬಿಕ್ಕಟ್ಟಿನ ಬಗ್ಗೆ ನೇವಿ ಚೀಫ್ ಮಾತು:‌ 41 ನೌಕೆ ಚಾರ್ಜ್

masthmagaa.com:

ಅರಬ್ಬೀ ಸಮುದ್ರ ಹಾಗೂ ಕೆಂಪು ಸಮುದ್ರಗಳ ಬಿಕ್ಕಟ್ಟಿನ ಬಗ್ಗೆ ನೇವಿ ಚೀಫ್‌ ಅಡ್ಮಿರಲ್‌ ಆರ್‌ ಹರಿಕುಮಾರ್‌ ಮಾತನಾಡಿದ್ದಾರೆ. ಈ ಪ್ರದೇಶದಲ್ಲಿ ಆಪರೇಶನ್‌ ‌ʻಸಂಕಲ್ಪʼದ ಮೂಲಕ ಸುಮಾರು 11 ಸಬ್‌ಮರಿನ್‌ ಹಾಗೂ 30 ವಾರ್‌ಶಿಪ್‌ಗಳನ್ನ ನಿಯೋಜಿಸಲಾಗಿದೆ. ಪೈರಸಿ ಸಂಬಂಧಿತ ಕಾರ್ಯಾಚರಣೆಗಳಲ್ಲಿ ಸುಮಾರು 102 ಜನರನ್ನ ಇದುವರೆಗೆ ರಕ್ಷಿಸಲಾಗಿದೆ. ಇದ್ರಲ್ಲಿ 27 ಪಾಕಿಸ್ತಾನೀಯರು, 30 ಇರಾನಿ ಪ್ರಜೆಗಳೂ ಸೇರಿದ್ದಾರೆ. ಇದುವರೆಗೆ ಭಾರತದ ಯಾವುದೇ ನೌಕೆಗಳ ಮೇಲೆ ದಾಳಿಯಾಗಿಲ್ಲ. ಈ ಹಡಗುಗಳಲ್ಲಿ ಭಾರತೀಯ ಸಿಬ್ಬಂದಿ ಇರೋದ್ರಿಂದ ಭಾರತ ಇದ್ರಲ್ಲಿ ಇನ್ವಾಲ್ವ್‌ ಆಗಿದೆ ಅಂದಿದ್ದಾರೆ. ಅಲ್ಲದೆ ಪೈರಸಿ ಅಥ್ವಾ ಕಡಲ್ಗಳ್ಳತನ ಮತ್ತೆ ಉದ್ಯಮ ಆಗೋ ತರ ಕಾಣ್ತಿದೆ, ಆದ್ರೆ ಇದನ್ನ ತಡೆಗಟ್ಟೋಕೆ ನಾವು ಪ್ರಯತ್ನ ಮಾಡ್ತಿದ್ದೇವೆ ಅಂದಿದ್ದಾರೆ. ಇನ್ನು ಸೊಮಾಲಿಯಾದಲ್ಲಿ ಕಡ್ಗಳ್ಳತನ ವಿರೋಧಿ ಕಾರ್ಯಚರಣೆ ನಡೆಸಿ ಮಾಲ್ಟಾ ಮೂಲದ ವ್ಯಾಪಾರಿ ಹಡಗನ್ನ ರಕ್ಷಿಸಿದ್ದ ಭಾರತೀಯ ನೇವಿ, 35 ಮಂದಿ ಕಡ್ಗಳ್ಳರನ್ನ ಬಂಧಿಸಿತ್ತು. ಇದೀಗ ಭಾರತೀಯ ನೌಕಾ ಪಡೆ ಈ ಕಡ್ಗಳ್ಳರನ್ನ ಭಾರತಕ್ಕೆ ತಂದು ಮುಂಬೈ ಪೊಲೀಸರಿಗೆ ಒಪ್ಪಿಸಿದೆ.

-masthmagaa.com

Contact Us for Advertisement

Leave a Reply