ಇರಾನ್‌ನಿಂದಲೂ ಅಫ್ಘನ್‌ ನಿರಾಶ್ರಿತರ ಗಡಿಪಾರು!

masthmagaa.com:

ಇತ್ತೀಚೆಗೆ ಪಾಕಿಸ್ತಾನದಲ್ಲಿದ್ದ ಲಕ್ಷಾಂತರ ಅಫ್ಘಾನಿಸ್ತಾನದ ನಿರಾಶ್ರಿತರನ್ನ ಹೊರ ಹಾಕಿತ್ತು. ಇದೀಗ ಇರಾನ್‌ನಲ್ಲೂ ಅಫ್ಘನ್‌ ನಿರಾಶ್ರಿತರನ್ನ ಗಡಿಪಾರು ಮಾಡೋ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಅಫ್ಘನ್‌ ನಿರಾಶ್ರಿತರನ್ನ ಹೊರಹಾಕಲು ಪೊಲೀಸರು ಅವ್ರನ್ನ ಅರೆಸ್ಟ್‌ ಮಾಡ್ತಾ ಇದ್ದಾರೆ. ಕಿರುಕುಳವನ್ನ ಕೊಡ್ತಾ ಇದ್ದಾರೆ ಅಂತ ಅಫ್ಘನ್‌ ನಿರಾಶ್ರಿತರು ಕಳವಳ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ತಾಲಿಬಾನ್‌ ಆಡಳಿತವಿರೋ ಅಫ್ಘಾನಿಸ್ತಾನಕ್ಕೆ ವಾಪಾಸ್‌ ಹೋಗ್ಬೇಕಾಗುತ್ತಲ್ಲ ಅಂತ ಅಫ್ಘನ್‌ ನಿರಾಶ್ರಿತರು ಆತಂಕದಲ್ಲಿದ್ದಾರೆ. ಇತ್ತ ಅಫ್ಘನ್‌ ನಿರಾಶ್ರಿತರನ್ನ ಗಡಿಪಾರು ಮಾಡ್ಬೇಡಿ ಹಾಗೂ ಅವ್ರಿಗೆ ಕಿರುಕುಳ ಕೊಡ್ಬೇಡಿ ಅಂತ ತಾಲಿಬಾನ್‌, ಪಾಕ್‌ ಹಾಗೂ ಇರಾನ್‌ ಎರಡಕ್ಕೂ ವಾರ್ನ್‌ ಮಾಡ್ತಿದ್ದಾರೆ. ಆದ್ರೆ ತಾಲಿಬಾನ್‌ಗೆ ಸೊಪ್ಪು ಹಾಕದ ಈ ರಾಷ್ಟ್ರಗಳು ಅಫ್ಘನ್‌ ನಿರಾಶ್ರಿತರನ್ನ ಹೊರದಬ್ಬುವ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳೋ ಕೆಲಸ ಮುಂದುವರೆಸಿವೆ. ಇನ್ನು ಅಫ್ಘಾನಿಸ್ತಾನದ ಹೇರತ್‌ ನಿರಾಶ್ರಿತರ ಇಲಾಖೆಯ ಪ್ರಕಾರ, ಕಳೆದ ವಾರ 20 ಸಾವಿರ ಅಫ್ಘನ್‌ ನಿರಾಶ್ರಿತರು ಇರಾನ್‌ನಿಂದ ಅಫ್ಘಾನಿಸ್ತಾನಕ್ಕೆ ವಾಪಾಸ್‌ ಆಗಿದ್ದಾರೆ.

-masthmagaa.com

Contact Us for Advertisement

Leave a Reply