ಅಫ್ಘಾನಿಸ್ತಾನದಲ್ಲಿ ಭೂಕಂಪ, ನಲುಗಿದ ದೆಹಲಿ NCR ಪ್ರದೇಶ!

masthmagaa.com:

ಅಫ್ಘಾನ್‌ನಲ್ಲಿ ಉಂಟಾದ ಭೂಕಂಪದಿಂದಾಗಿ ದೆಹಲಿ ಮತ್ತು ಸುತ್ತಲಿನ ಪ್ರದೇಶಗಳು ಕಂಪಿಸಿರೋದು ವರದಿಯಾಗಿದೆ. 6.1 ತೀವ್ರತೆಯ ಭೂಕಂಪದ ಕೇಂದ್ರಬಿಂದು ಆಫ್ಘನಿಸ್ತಾನದಲ್ಲಿ ರೆಕಾರ್ಡ್‌ ಆಗಿದ್ದು, ಮಧ್ಯಾಹ್ನ ಸುಮಾರು 2:50ಕ್ಕೆ ಭೂಮಿ ಕಂಪಿಸಿದೆ ಅಂತ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಜೊತೆಗೆ ಜಮ್ಮು & ಕಾಶ್ಮೀರ ಹಾಗೂ ಪಾಕ್‌ನ ಲಾಹೋರ್‌ನಲ್ಲೂ ಭೂಮಿ ಕಂಪಿಸಿದೆ ಎನ್ನಲಾಗಿದೆ. ಸದ್ಯ ಈ ಪ್ರದೇಶಗಳಲ್ಲಿ ಯಾವ್ದೇ ರೀತಿ ಪ್ರಾಣ ಹಾನಿ ಅಥ್ವಾ ನಷ್ಟ ಆಗಿರೋ ಬಗ್ಗೆ ವರದಿಯಾಗಿಲ್ಲ.

-masthmagaa.com

Contact Us for Advertisement

Leave a Reply