ಅಫ್ಘಾನಿಸ್ತಾನದಲ್ಲಿ ಭಾರೀ ಪ್ರವಾಹ! ಕನಿಷ್ಠ 33 ಮಂದಿ ಸಾವು!

masthmagaa.com:

ಹಸಿವು, ಸ್ವಾತಂತ್ರ್ಯ ಹರಣದಿಂದ ((ಬಳಸ್ತಿರೋ)) ಅಫ್ಘಾನಿಗರಿಗೆ ಈಗ ಪ್ರಕೃತಿ ಕೂಡ ಶಾಕ್‌ ಕೊಟ್ಟಿದೆ. ಭಾರೀ ಮಳೆಗೆ ಪ್ರವಾಹ ಉಂಟಾದ ಪರಿಣಾಮ ಕಳೆದ ಮೂರು ದಿನಗಳಲ್ಲಿ ಕನಿಷ್ಠ 33 ಮಂದಿ ಮೃತಪಟ್ಟಿದ್ದಾರೆ, 27 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನ್‌ನ ರಾಜಧಾನಿ ಕಾಬುಲ್‌ ಸೇರಿ ಇತರೆ ಪ್ರಾಂತ್ಯಗಳಲ್ಲೂ ಪ್ರವಾಹ ಉಂಟಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಅಂತೇಳಲಾಗ್ತಿದೆ. ಈಗಾಗಲೇ ಕಳೆದ ಮೂರು ದಿನದಲ್ಲಿ 600ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದ್ದು, ಸುಮಾರು 200 ಜಾನುವಾರುಗಳು ಸಾವನ್ನಪ್ಪಿವೆ. ಅಲ್ದೇ ಸಾವಿರಾರು ಹೆಕ್ಟೇರ್‌ಗಳ ಕೃಷಿ ಭೂಮಿ, ನೂರಾರು ಕಿಮೀನಷ್ಟು ರಸ್ತೆಗಳು ಪ್ರವಾಹದಿಂದ ಹಾನಿಗೊಳಗಾಗಿದೆ. ಹೀಗಂತ ತಾಲಿಬಾನ್‌ನ ವಕ್ತಾರರು ಮಾಹಿತಿ ನೀಡಿದ್ಧಾರೆ.

-masthmagaa.com

Contact Us for Advertisement

Leave a Reply