ಹಿಂಸಾಚಾರದಿಂದ ತುಂಬಿದ್ದ ಅಫ್ಘಾನ್‌ ಈಗ ಪ್ರವಾಸಿ ತಾಣವಾಗ್ತಿದೆ!

masthmagaa.com:

ದಶಕಗಳ ಕಾಲ ಯುದ್ಧ, ಹಿಂಸಾಚಾರದಲ್ಲಿ ಹೊತ್ತುರಿದ ಅಫ್ಘಾನಿಸ್ತಾನದಲ್ಲಿ ಈಗ ಟೂರಿಸಂ ಮೊಳಕೆಯೊಡೀತಾ ಇದೆ. ಟೂರಿಸಂನಿಂದ ತಮ್ಮ ಆರ್ಥಿಕತೆಗೆ ಏನಾದ್ರು ಗಿಟ್ಟಿಸ್ಬೇಕು ಅಂತ ತಾಲಿಬಾನ್‌ ಪ್ರವಾಸಿಗರನ್ನ ಓಲೈಸೋಕೆ ನೋಡ್ತಿದೆ. ಇದಕ್ಕಾಗಿ ಈಗ ತಾಲಿಬಾನ್‌ ಕಾಬುಲ್‌ನಲ್ಲಿ ಟೂರಿಸಂ ಟ್ರೇನಿಂಗ್‌ ಕ್ಲಾಸ್‌ಗಳನ್ನ ಶುರು ಮಾಡಿದೆ. ಇಲ್ಲಿ ಹಾಸ್ಪಿಟಾಲಿಟಿ ಕೋರ್ಸ್‌ಗಳನ್ನ ಹೇಳಿಕೊಡಲಾಗ್ತಿದೆಯಂತೆ… ಅಫ್ಘಾನ್‌ನ ಇತಿಹಾಸ, ಸಂಸ್ಕೃತಿ ಕಲೆ ಮತ್ತಿತರ ವಿಚಾರಗಳ ಬಗ್ಗೆ ಪಾಠ ಹೇಳಲಾಗ್ತಿದೆಯಂತೆ. ಅಲ್ಲದೇ ವಿದೇಶಿ ಮಹಿಳೆಯರು ಬಂದಾಗ ಅವ್ರನ್ನ ಹೇಗೆ ಟ್ರೀಟ್‌ ಮಾಡ್ಬೇಕು ಅನ್ನೋದಕ್ಕು ಕೋರ್ಸ್‌ ಇದೆಯಂತೆ. ಅಂದ್ಹಾಗೆ ಇತ್ತೀಚಿನ ದಿನಗಳಲ್ಲಿ ಅಫ್ಘಾನ್‌ಗೆ ಭೇಟಿ ನೀಡೋ ಪ್ರವಾಸಿಗರ ಸಂಖ್ಯೆ ಸ್ವಲ್ಪ ಜಾಸ್ತಿಯಾಗಿದೆ. 2021ರಲ್ಲಿ 691 ಜನ ಪ್ರವಾಸಿಗರು ಅಫ್ಘಾನ್‌ಗೆ ಭೇಟಿ ನೀಡಿದ್ರು. 2022ರಲ್ಲಿ ಇದು 2,300ಕ್ಕೆ ಏರಿಕೆಯಾಗಿದ್ದು 2023ರಲ್ಲಿ 7 ಸಾವಿರ ಆಗಿದೆ. ಹೀಗಾಗಿ ಇದನ್ನ ಇನ್ನ ಹೆಚ್ಚು ಮಾಡ್ಬೇಕು ಅಂತ ತಾಲಿಬಾನ್‌ ಕಸರತ್ತು ಮಾಡ್ತಿದೆ. ಅಫ್ಘಾನ್‌ಗೆ ಸದ್ಯ ಹೆಚ್ಚಾಗಿ ಚೀನಿ ಪ್ರವಾಸಿಗರು ಬರ್ತಾ ಇದ್ದಾರಂತೆ..

-masthmagaa.com

Contact Us for Advertisement

Leave a Reply