ಭಾರತದ ತ್ರಿ-ಸೇನಾ ಘಟಕ UPಯಿಂದ ಬೆಂಗಳೂರಿಗೆ ಸ್ಥಳಾಂತರ!

masthmagaa.com:

ಭಾರತೀಯ ಸೇನೆಯಲ್ಲಿ ಹೊಸದಾಗಿ ರಚಿಸಿರೊ ʻಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗʼ AFSODಯ ತೀವ್ರ ಸೇವಾ ಘಟಕವನ್ನ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ಮೊದಲು ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟಕದ ಹೆಡ್‌ಕ್ವಾರ್ಟರ್‌ ಇತ್ತು. ಇದೀಗ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನ ಹೊಂದಿದ್ದು, ವಿಶೇಷ ಪಡೆಗಳ ತರಬೇತಿ ಕೇಂದ್ರವಾಗಿದೆ. ಭೂ, ವಾಯು ಹಾಗೂ ನೌಕಾ ಸೇನೆಗಳ ನಡುವಿನ ಸಂಪರ್ಕವನ್ನ ಹೆಚ್ಚಿಸುವ ನಿಟ್ಟಿನಲ್ಲಿ ಈ ತ್ರಿ ಸೇವಾ ಘಟಕವನ್ನ ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ಆರ್ಮಿಯ ವಿಶೇಷ ಪಡೆಗಳು, ನೇವಿಯ ಮರೈನ್‌ ಕಮಾಂಡೋಸ್‌ (MARCOS) ಹಾಗೂ ವಾಯುಸೇನೆಯ ಗರುಡ್‌ ಸೇರಿವೆ. ಮೂರು ಪಡೆಗಳನ್ನ ಒಳಗೊಂಡ AFSOD ಪಡೆಗಳನ್ನ ಭಾರತ-ಚೀನಾ ಗಡಿಯಲ್ಲಿ ನಿಯೋಜಿಸಲಾಗಿದೆ. ಈ ಪಡೆಗಳಿಗೆ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ವಿಶೇಷ ಸಾಧನಗಳನ್ನ ಸರ್ಕಾರ ನೀಡುತ್ತಿದೆ.

-masthmagaa.com

Contact Us for Advertisement

Leave a Reply