ಸರ್ಕಾರಿ ಬಂಗಲೆ ತೆರವುಗೊಳಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ!

masthmagaa.com:

ಲೋಕಸಭಾ ಸದಸ್ಯತ್ವ ರದ್ಧಾಗಿರುವ ಹಿನ್ನಲೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿದ್ದಾರೆ. ಮೋದಿ ಸರ್‌ನೇಮ್‌ ಕೇಸ್‌ನಲ್ಲಿ ಶಿಕ್ಷೆ ಘೋಷಣೆಯಾದ ನಂತ್ರ ರಾಹುಲ್‌ರ ಸಂಸದ ಸ್ಥಾನವನ್ನ ರದ್ಧುಗೊಳಿಸಲಾಗಿತ್ತು. ಹೀಗಾಗಿ 12 ತುಘಲಕ್‌ ಲೇನ್ ಸರ್ಕಾರಿ ಬಂಗಲೆಯನ್ನ ಖಾಲಿ ಮಾಡುವಂತೆ ಕಳೆದ ತಿಂಗಳೇ ನೋಟಿಸ್‌ ನೀಡಲಾಗಿತ್ತು. ಬಂಗಲೆ ಖಾಲಿ ಮಾಡಲು ಏಪ್ರಿಲ್‌ 22 ಅಂದ್ರೆ ಇಂದು ಕೊನೆ ದಿನವಾದ್ರಿಂದ ರಾಹುಲ್‌ ಗಾಂಧಿ ಸರ್ಕಾರಿ ಬಂಗಲೆಯನ್ನ ತೆರವುಗೊಳಿಸಿದ್ದಾರೆ. 18 ವರ್ಷದಿಂದ ಅಂದ್ರೆ 2005ರಿಂದ ರಾಹುಲ್‌ ಇದೇ ಬಂಗಲೆಯಲ್ಲಿ ವಾಸಿಸುತ್ತಿದ್ರು. ಇದೀಗ ಬಂಗಲೆಯನ್ನ ತೆರವುಗೊಳಿಸಿದ್ದಾರೆ. ಅಂದ್ಹಾಗೆ ಏಪ್ರಿಲ್‌ 14ರಿಂದಲೇ ರಾಹುಲ್‌ ಅವ್ರು ಸ್ಥಳಾಂತರ ಪ್ರಾರಂಭಿಸಿದ್ದು, ಈಗಾಗಲೇ ತಮ್ಮ ತಾಯಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯೊಂದಿಗೆ ಜನಪಥ್‌ ನಿವಾಸದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply