ಮಸ್ಕ್‌ ಕೈಗೆ ಬಂದ್ಮೇಲೆ ಮಂಕಾದ X: 71% ವ್ಯಾಲ್ಯೂ ಕುಸಿತ!

masthmagaa.com:

ಜಗತ್ತಿನ ಅತ್ಯಂತ ಶ್ರೀಮಂತ ಎಲಾನ್‌ ಮಸ್ಟ್‌ ಟ್ವಿಟರ್‌ ಖರೀಧಿಸಿ ಅದಕ್ಕೆ X ಅಂತ ಹೆಸರು ಕೊಟ್ಮೇಲೆ ಪ್ಲಾಟ್‌ಫಾರ್ಮ್‌ ಮಂಕಾಗಿದೆ ಅನ್ನೋ ವರದಿ ಬಂದಿದೆ. 2022ರ ಏಪ್ರಿಲ್‌ನಲ್ಲಿ ಟ್ವಿಟರ್‌ ಖರೀಧಿ ಒಪ್ಪಂದ ಫೈನಲ್‌ ಆದಾಗಿಂದ ಟ್ವಿಟರ್‌ನ ವ್ಯಾಲ್ಯೂ ಬರೋಬ್ಬರಿ 71% ಬಿದ್ದಿದೆ. ಅಂದ್ಹಾಗೆ ಮಸ್ಕ್‌ X ಒಡೆಯರಾದ್ಮೇಲೆ ಸುಮಾರು 50% ಕೆಲಸಗಾರರನ್ನ ತೆಗೆದು ಹಾಕಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಾಸಿಕ ಬಳಕೆದಾರರ ಸಂಖ್ಯೆ ಕೂಡ 15%ರಷ್ಟು ಇಳಿದಿದೆ ಅಂತ ಡೇಟಾ ಹೇಳುತ್ತೆ. ಇದ್ರ ಮಧ್ಯೆ Xನ ಶೇರ್‌ ಹೋಲ್ಡರ್‌ ಆಗಿರೋ ಫಿಡೆಲಿಟಿ ಮ್ಯೂಚುವಲ್‌ ಫಂಡ್‌ ಸಂಸ್ಥೆ ಕೂಡ X ವ್ಯಾಲೂ ಇಳಿದಿದೆ ಅಂತ ಬಹಿರಂಗಪಡಿಸಿದೆ. ಆದ್ರೆ ಈ ಬಗ್ಗೆ X ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply