ಚೀನಾ ರಕ್ಷಣಾ ಸಚಿವ ನಿಗೂಢ ಕಣ್ಮರೆ! ಏನಾಗ್ತಿದೆ ಜಿನ್‌ಪಿಂಗ್‌ ಸಾಮ್ರಾಜ್ಯದಲ್ಲಿ?

masthmagaa.com:

ಚೀನಾದಲ್ಲಿ ಅಲ್ಲಿನ ಉನ್ನತ ಅಧಿಕಾರಿಗಳು ನಿಗೂಢವಾಗಿ ಕಾಣೆಯಾಗೋದು ಮುಂದುವರೆದಿದೆ. ಇತ್ತೀಚೆಗೆ ಚೀನಾದ ಮಾಜಿ ವಿದೇಶಾಂಗ ಸಚಿವ ಕಿನ್‌ ಗಾಂಗ್‌ ಕಾಣೆಯಾಗಿದ್ದಾರೆ ಅನ್ನೋ ಸುದ್ಧಿ ಹರದಾಡಿತ್ತು. ಇದೀಗ ಚೀನಾದ ರಕ್ಷಣಾ ಸಚಿವ ಲಿ ಶಂಗ್ಫು ಅವ್ರು ಕಳೆದ 2 ವಾರಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಂತ ತಿಳಿದು ಬಂದಿದೆ. ಶಂಗ್ಫು ಅವ್ರು ಕೊನೆಯ ಬಾರಿಗೆ ಆಗಸ್ಟ್‌ 29ರಂದು ನಡೆದ 3ನೇ ಚೀನಾ- ಆಫ್ರಿಕಾ ಪೀಸ್‌ ಅಂಡ್‌ ಸೆಕ್ಯುರಿಟಿ ಫೋರಂನಲ್ಲಿ ಭಾಗವಹಿಸಿ ಮಾತನಾಡಿದ್ದರು. ಅದಾದ ಬಳಿಕ ಶಂಗ್ಫು ಅವ್ರು ಪಬ್ಲಿಕ್‌ ಆಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಸಾಕಷ್ಟು ಅನುಮಾನುಗಳು ಹುಟ್ಟಿಕೊಂಡಿವೆ. ಯಾಕಂದ್ರೆ 2017 ರಲ್ಲಿ ನಡೆದ ಸೇನಾ ಶಸ್ತ್ರಾಸ್ತ್ರ ಅಕ್ರಮದ ಕುರಿತು ತನಿಖೆ ನಡೆಸಲಾಗುತ್ತೆ ಅಂತ ಚೀನಾ ಸೇನೆ ಹೇಳಿದೆ. ಇಲ್ಲಿ ಮುಖ್ಯವಾದ ವಿಚಾರ ಏನಂದ್ರ 2017ರಿಂದ 2022ರ ವರೆಗೆ ಸೇನಾ ಉಪಕರಣಗಳ ವಿಭಾಗದ ಮುಖ್ಯಸ್ಥರಾಗಿ ಶಂಗ್ಫು ಕೆಲಸ ಮಾಡಿದ್ದರು. ಈ ಹಿನ್ನಲೆಯಲ್ಲಿ ಈಗ ಆ ಟೈಮ್‌ನ ತನಿಖೆಗೆ ಸೇನೆ ಮುಂದಾಗಿರೋದನ್ನ ನೋಡಿದ್ರೆ, ಈ ಸ್ಕ್ಯಾಮ್‌ನಲ್ಲಿ ಶಂಗ್ಫು ಏನಾದ್ರು ಪಾಲ್ಗೊಂಡಿರುವ ಸಾಧ್ಯೆತ ಇರ್ಬೋದು. ಈ ಕಾರಣಕ್ಕೆ ಅವರನ್ನ ರಕ್ಷಣಾ ಸಚಿವ ಸ್ಥಾನದಿಂದ ರಿಮೂವ್‌ ಮಾಡಿರ್ಬೋದು ಅನ್ನೋ ಮಾತುಗಳು ಕೇಳಿ ಬರ್ತಿವೆ. ಅಂದ್ಹಾಗೆ ಶಂಗ್ಫು ಕಾಣೆಯಾಗಿದ್ದಾರೆ ಅನ್ನೋ ಸುದ್ಧಿ ಹರಿದಾಡ್ತಿರೋ ನಡುವೆಯೇ, ಸೇನೆಯಲ್ಲಿ ಏಕತೆ, ಭದ್ರತೆ ಮತ್ತು ಸ್ಥಿರತೆಯನ್ನ ಕಾಪಾಡಿಕೊಳ್ಳುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಕರೆ ಕೊಟ್ಟಿದ್ದಾರೆ. ಹೀಗಾಗಿ ಶಂಗ್ಫು ಕಾಣೆಯಾಗಿರುವ ಬಗ್ಗೆ ಇನ್ನಷ್ಟು ಊಹಾಪೋಹಗಳು ಹರಿದಾಡುತ್ತಿದ್ದು, ಅವರ ಎಲ್ಲಿದ್ದಾರೆ ಏನ್‌ ಮಾಡ್ತಿದಾರೆ ಅಂತ ತಿಳುದು ಬಂದಿಲ್ಲ.

-masthmagaa.com

Contact Us for Advertisement

Leave a Reply