ಗುಜರಾತ್‌ನಲ್ಲಿ ನಡೆಯಲಿದ್ಯಾ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟ?

masthmagaa.com:

13 ವರ್ಷಗಳ ನಂತ್ರ ಮತ್ತೆ ಕಾಮನ್‌ವೆಲ್ತ್‌ ಗೇಮ್ಸ್‌ ಭಾರತದಲ್ಲಿ ನಡೆಸೋ ವಿಚಾರ ಚರ್ಚೆಯಾಗ್ತಿದ್ದು, ಗುಜರಾತ್‌ನ ಅಹ್ಮದಾಬಾದ್‌ ಬಿಡ್‌ ಮಾಡ್ಬಹುದು ಎನ್ನಲಾಗ್ತಿದೆ. ಅಂದ್ಹಾಗೆ ಖರ್ಚು ಭರಿಸೋದು ಕಷ್ಟ ಅಂತೇಳಿ ಆಸ್ಟ್ರೇಲಿಯಾದ ವಿಕ್ಟೋರಿಯಾ 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯದಿಂದ ಹಿಂದೆ ಸರಿದಿದೆ. ಈ ಕ್ರೀಡಾಕೂಟಕ್ಕಾಗಿ 7 ಬಿಲಿಯನ್‌ ಆಸ್ಟ್ರೇಲಿಯಾದ ಡಾಲರ್‌ ಅಂದ್ರೆ ಸುಮಾರು 38.5 ಸಾವಿರ ಕೋಟಿ ರೂಪಾಯಿ ವೆಚ್ಚವಾಗಬಹುದು. ಹೀಗಾಗಿ ಇಷ್ಟೊಂದು ವೆಚ್ಚ ಮಾಡಲು ನಮ್ಮಿಂದ ಸಾಧ್ಯವಾಗ್ತಿಲ್ಲ ಆದ್ರಿಂದ ಕಾಮನ್‌ವೆಲ್ತ್‌ ಟೂರ್ನಿಯನ್ನ ಹೋಸ್ಟ್‌ ಮಾಡಲ್ಲ ಅಂತ ವಿಕ್ಟೋರಿಯಾದ ಮುಖ್ಯಸ್ಥ ಡೇನಿಯಲ್‌ ಆಂಡ್ರೀವ್ಸ್‌ ಅನೌನ್ಸ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಈ ಕ್ರೀಡಾಕೂಟದ ಆತಿಥ್ಯ ವಹಿಸಲು ಗುಜರಾತ್‌ನ ಅಹಮದಾಬಾದ್‌ ಬಿಡ್‌ ಮಾಡುವ ಸಾಧ್ಯತೆಯಿದೆ ಅಂತ ತಿಳಿದು ಬಂದಿದೆ. ಅಂದ್ಹಾಗೆ 2030ರ ಕಾಮನ್‌ವೆಲ್ತ್‌ ಗೇಮ್ಸ್‌ನ ಬಿಡ್‌ಗೆ ತಯಾರಿ ನಡೆಸುತ್ತಿರೋ ಗುಜರಾತ್‌ ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನ ನಿರ್ಮಿಸುತ್ತಿದೆ. ಆದ್ರೆ ಎಲ್ಲಾ ಅಭಿವೃದ್ಧಿ ಕೆಲಸಗಳು 2026ರ ಒಳಗೆ ಮುಗಿಯುವ ಸಾಧ್ಯತೆಯಿದ್ದು, ಕ್ರೀಡಾಕೂಟವನ್ನ ಹೋಸ್ಟ್‌ ಮಾಡ್ಬೋದು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply