ಇಡೀ ಜಗತ್ತಲ್ಲಿ ಭಾರತೀಯರೇ ಬ್ಯುಟಿಫುಲ್‌..! ಸುಂದರ..! ಆಕರ್ಷಕ! ಸರ್ವೇಯಲ್ಲಿ ಬಹಿರಂಗ!

masthmagaa.om:

ಭಾರತೀಯರು ಇಡೀ ವಿಶ್ವದಲ್ಲೇ ಸುಂದರ ಹಾಗೂ ಆಕರ್ಷಕ ಅಂತ ಅಧ್ಯಯನ ಒಂದು ಹೇಳಿದೆ. ಫ್ರಾನ್ಸ್‌ ಮೂಲದ ಸಂಸ್ಥೆಯೊಂದು ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಬಳಸಿ ಸರ್ವೆ ಮಾಡಿತ್ತು. ಅಲ್ಲಿ ಈ ಫಲಿತಾಂಶ ಹೊರಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಎಲ್ಲ ದೇಶದ ಪ್ರಜೆಗಳ ಫೋಟೋಗಳು, ಟಾಪಿಕ್‌ಗಳು, ಬ್ಲಾಗ್‌ಗಳನ್ನು ಪರಿಶೀಲನೆ ಮಾಡಿದ ಮೇಲೆ ಅದ್ರಲ್ಲಿ ಭಾರತೀಯರೇ ಟಾಪ್‌ನಲ್ಲಿ ಇದ್ದಾರಂತೆ. ಜೊತೆಯಲ್ಲೇ ತಮ್ಮ ಫೋಟೋಗಳ ಜೊತೆ ಹಾಕಿಕೊಂಡಿರುವ ಪದಗಳನ್ನೂ ವೆಬ್‌ಸೈಟ್‌ನ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಗ್ರಹಿಸಿದೆಯಂತೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವ ದೇಶದ ಮಂದಿ ಎಷ್ಟು ಪೋಸ್ಟ್‌ ಹಾಕಿದ್ದಾರೆ. ಅದಕ್ಕೆ ಕಾಮೆಂಟ್ ಎಷ್ಟು ಬಂದಿವೆ, ವೋಟ್‌ಗಳು ಎಷ್ಟು ಬಂದಿವೆ ಅನ್ನೋದನ್ನ ಸೇರಿಸಿ ಈ ವರದಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply