ಭಾರತಕ್ಕೆ ನುಗ್ಗಿದ ಪಾಕ್‌ ವಿಮಾನ! ಅಲರ್ಟ್‌ ಆಗಿತ್ತು ವಾಯುಪಡೆ..! ಆದ್ರೆ ಕಾರಣವೇ ಬೇರೆ!

masthmagaa.com:

ಅಚ್ಚರಿಯ ಬೆಳವಣಿಗೆಯಲ್ಲಿ ಭಾರತದ ಗಡಿ ಪ್ರದೇಶಕ್ಕೆ ಪಾಕಿಸ್ತಾನದ ವಿಮಾನ ನುಗ್ಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪಾಕಿಸ್ತಾನದ ನಾಗರೀಕ ವಿಮಾನ ಪಾಕಿಸ್ತಾನ್‌ ಇಂಟರ್ನ್ಯಾಷನಲ್‌ PK-248 ಹೆಸರಿನ ಬೋಯಿಂಗ್‌ 777 ಜೆಟ್‌, ಮೇ 4 ರಂದು ರಾತ್ರಿ 8 ಗಂಟೆಗೆ ಭಾರತದ ವಾಯುಪ್ರದೇಶಕ್ಕೆ ನುಗ್ಗಿತ್ತು. ಮಸ್ಕಟ್‌ನಿಂದ ಲೋಹೋರ್‌ಗೆ ಈ ವಿಮಾನ ಬರ್ತಾ ಇತ್ತು. ಆದ್ರೆ ಹವಾಮಾನ ವೈಪರೀತ್ಯದ ಕಾರಣದಿಂದ ಅಂದ್ರೆ ಹೆಚ್ಚು ಮಳೆ ಬರ್ತಿದ್ದ ಕಾರಣದಿಂದ ಈ ವಿಮಾನಕ್ಕೆ ಲಾಹೋರ್‌ ನಿಲ್ದಾಣದಲ್ಲಿ ಲ್ಯಾಂಡ್‌ ಆಗೋಕೆ ಅವಕಾಶ ಇರಲಿಲ್ಲ. ಹೀಗಾಗಿ ಸ್ವಲ್ಪ ಕಾಲ ಆಕಾಶದಲ್ಲೇ ಹಾರಾಡುವಂತೆ ಪೈಲೆಟ್‌ಗೆ ಸೂಚನೆ ನೀಡಲಾಗಿತ್ತು. ಹೀಗಾಗಿ ವಿಮಾನ ಆಕಾಶದಲ್ಲೇ ಬೀಡುಬಿಟ್ಟಿದ್ದು ನೋಡು ನೋಡುತ್ತಿದ್ದಂತೆ ಭಾರತದ ವಾಯುಪ್ರದೇಶಕ್ಕೆ ನುಗ್ಗಿದೆ. ಕನಿಷ್ಠ 10 ನಿಮಿಷಗಳ ಕಾಲ ಭಾರತದ ಒಳಗೆ 120 ಕಿಲೋಮೀಟರ್‌ ಕ್ರಮಿಸಿದ್ದು ಬಳಿಕ ಪಾಕಿಸ್ತಾನಕ್ಕೆ ಮರಳಿದೆ. ವಿಮಾನ ಭಾರತಕ್ಕೆ ಪ್ರವೇಶ ಮಾಡಿದ್ದ ಸ್ಥಳವನ್ನ ಪಂಜಾಬ್‌ನ ಛಿನಾ ಬಿಧಿ ಚಾಂದ್‌ ಗ್ರಾಮ ಅಂತ ಗುರುತಿಸಲಾಗಿದೆ. ಈ ಗ್ರಾಮ ಅಮೃತ್‌ಸರದಿಂದ 37 ಕಿಲೋಮೀಟರ್‌ ದೂರದಲ್ಲಿದೆ. ಇಷ್ಟು ಹತ್ತಿರದಲ್ಲಿ ಪಾಕ್‌ ವಿಮಾನ ಬಂದಿದ್ದು ತೀವ್ರ ಕೂತುಹಲ ಮೂಡಿಸಿದೆ.

ವಿಮಾನ ಭಾರತ ಪ್ರವೇಶ ಮಾಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರತ ಸರ್ಕಾರವಾಗಲೀ ಪಾಕ್‌ ಸರ್ಕಾರವಾಗಲೀ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಆದ್ರೆ ಈ ಪ್ರಕರಣದ ಕುರಿತು ಎರಡೂ ದೇಶಗಳ ವಿಮಾನಯಾನ ಅಧಿಕಾರಿಗಳು ಮಾತುಕತೆ ಮಾಡಿದ್ದಾರೆ. ಭಾರತೀಯ ಅಧಿಕಾರಿಗಳ ಪರ್ಮಿಷನ್‌ ಪಡ್ಕೊಂಡೇ ಈ ವಿಮಾನವನ್ನ ಭಾರತದ ವಾಯುಪ್ರದೇಶಕ್ಕೆ ನುಗ್ಗಿಸಲಾಗಿತ್ತು ಅಂತ ಮೂಲಗಳು ತಿಳಿಸಿವೆ. ಅಲ್ದೆ ವಿಮಾನ ಭಾರತಕ್ಕೆ ಪ್ರವೇಶಿಸಿದ್ದ ವೇಳೆ ವಾಯುಪಡೆ ಕೂಡ ಅಲರ್ಟ್‌ ಆಗಿತ್ತು. ಆದ್ರೆ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಅಧಿಕಾರಿಗಳು ಈ ವಿಚಾರವನ್ನ ವಾಯುಪಡೆಗೆ ತಿಳಿಸಿದ್ರು. ಹೀಗಾಗಿ ಯಾವುದೇ ಅನಾಹುತ ನಡೀಲಿಲ್ಲ ಅಂತ ಗೊತ್ತಾಗಿದೆ. ಯಾಕಂದ್ರೆ ಭಾರತ ಪಾಕ್‌ ಗಡಿಯಲ್ಲಿ ಯಾವ ಪರಿಸ್ಥಿತಿ ಅಂತ ಎಲ್ರಿಗೂ ಗೊತ್ತು. ಪಾಕಿಸ್ತಾನದಿಂದ ಒಂದು ಕೀಟ ಹಾರಿದ್ರೂ ಭಾರತ ಪರಿಶೀಲನೆ ಮಾಡಬೇಕಾದ ಪರಿಸ್ಥಿತಿ ಇದೆ. ಇಂತಹ ಸಂಧರ್ಭದಲ್ಲಿ ಪಾಕ್‌ಗಡಿಯಿಂದ ವಿಮಾನವೇ ಬಂದ್ರೆ ಆ ವಿಚಾರದಲ್ಲಿ ಭಾರತೀಯ ವಾಯುಪಡೆ ಅಲರ್ಟ್‌ ಆಗಲೇ ಬೇಕಿತ್ತು. ಕ್ರಮ ತಗೊಳ್ಳೇ ಬೇಕಿತ್ತು. ಇದರ ಅರಿವಿದ್ದ ಅಧಿಕಾರಿಗಳು ವಾಯುಪಡೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ವಾತವರಣ ಸರಿ ಆದ್ಮೇಲೆ ವಿಮಾನ ಪಾಕ್‌ಗೆ ಮರಳಿದೆ. ಅಂದಹಾಗೆ ಸ್ನೇಹಿತರೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಯಾವುದೇ ವಿಮಾನ ಹಾರಾಟ ನಡೆಯುತ್ತಿಲ್ಲ. ಹೀಗಾಗಿ ಇಲ್ಲಿ ಒಂದು ದೇಶದ ವಾಯುಪ್ರದೇಶದಲ್ಲಿ ಇನ್ನೊಂದು ದೇಶದ ವಿಮಾನ ಪ್ರವೇಶ ಮಾಡಿದ್ರೆ ಅದು ಅಪರಾಧವಾಗುತ್ತೆ.

masthmagaa.com

Contact Us for Advertisement

Leave a Reply