ವಾಯುಯಾನ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ʻಏರ್‌ ಇಂಡಿಯಾʼ ದಿಂದ 840 ವಿಮಾನ ಖರೀದಿ!

masthmagaa.com:

ಟಾಟಾ ಗ್ರೂಪ್‌ ಒಡೆತನದ ಏರ್‌ ಇಂಡಿಯಾ ವಾಯುಯಾನ ಕ್ಷೇತ್ರದ ಇತಿಹಾಸದಲ್ಲೆ ಅತಿದೊಡ್ಡ ಮೈಲುಗಲ್ಲು ಸೃಷ್ಟಿಸೋಕೆ ಮುಂದಾಗಿದೆ. ಈಗಾಗಲೇ ಬೋಯಿಂಗ್‌ ಮತ್ತು ಏರ್‌ಬಸ್‌ ಕಂಪನಿಗಳಿಂದ ಒಟ್ಟು 470 ವಿಮಾನಗಳನ್ನ ಖರೀದಿ ಮಾಡೋಕೆ ಆರ್ಡ್‌ರ್‌ ಮಾಡಿರೊ ಏರ್‌ಲೈನ್‌, ಇನ್ನೂ 370 ವಿಮಾನಗಳನ್ನ ಖರೀದಿಸೋ ಆಯ್ಕೆ ಹೊಂದಿದೆ ಅಂತ ಅಧಿಕಾರಿಯೊಬ್ರು ಹೇಳಿದ್ದಾರೆ. ಇದಕ್ಕಾಗಿ ಪರ್ಚೇಸ್‌ ರೈಟ್ಸ್‌ ಪಡೆದಿದ್ದು, ಮುಂದಿನ ಒಂದು ದಶಕದಲ್ಲಿ ಇಂದಿನ ದರಕ್ಕೆ ಬೋಯಿಂಗ್ ಹಾಗೂ ಏರ್‌ಬಸ್‌ ತಮ್ಮ ವಿಮಾನಗಳನ್ನ ಏರ್‌ ಇಂಡಿಯಾಗೆ ಮಾರೋಕೆ ಒಪ್ಪಿವೆ ಅಂತ ಏರ್‌ ಇಂಡಿಯಾ ಅಧಿಕಾರಿ ನಿಪುಣ್‌ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply