ಕೂದಲೆಳೆ ಅಂತರದಲ್ಲಿ ತಪ್ಪಿದ ನೇಪಾಳ ಏರ್‌ಲೈನ್‌ ಹಾಗೂ ಏರ್‌ ಇಂಡಿಯಾ ನಡುವಿನ ಭಾರಿ ಅಪಘಾತ!

masthmagaa.com:

ಏರ್‌ ಇಂಡಿಯಾ ಹಾಗೂ ನೇಪಾಳ ಏರ್‌ಲೈನ್ಸ್‌ ವಿಮಾನಗಳು ಪರಸ್ಪರ ಡಿಕ್ಕಿಯಾಗೋದ್ರಿಂದ ಸ್ಪಲ್ಪದ್ರಲ್ಲೇ ಬಚಾವ್‌ ಆಗಿದ್ದು ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ನೇಪಾಳ ಏರ್‌ಲೈನ್ಸ್‌ನ ವಿಮಾನ ಮಲೇಷ್ಯಾದಿಂದ ನೇಪಾಳ ರಾಜಧಾನಿ ಕಠ್ಮಂಡುಗೆ ಹೋಗ್ತಾ ಇತ್ತು. ಏರ್‌ ಇಂಡಿಯಾ ವಿಮಾನ ದೆಹಲಿಯಿಂದ ಕಠ್ಮಂಡುಗೆ ಹೋಗ್ತಾ ಇತ್ತು. ಈ ಎರಡೂ ವಿಮಾನಗಳು ಬಹುತೇಕ ಡಿಕ್ಕಿಯಾಗೊ ಹಂತಕ್ಕೆ ತಲುಪಿದ್ದವು. ಕೂಡಲೇ ರಾಡಾರ್‌ನಲ್ಲಿ ತುರ್ತು ಸೂಚನೆ ಬಂದಿದ್ದು ನೇಪಾಳ ಏರ್‌ಲೈನ್‌ ವಿಮಾನ ಕೂಡಲೇ 7 ಸಾವಿರ ಅಡಿ ಕೆಳಗಿಳಿದೆ. ಈ ಮೂಲಕ ಭಾರಿ ಅನಾಹುತವನ್ನ ತಪ್ಪಿಸಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಘಟನೆ ನಡೆಯುವ ವೇಳೆ ಕಂಟ್ರೋಲ್‌ ರೂಮ್‌ನಲ್ಲಿದ್ದ ಮೂವರು ಅಧಿಕಾರಿಗಳನ್ನ ನೇಪಾಳ ಸಸ್ಪೆಂಡ್‌ ಮಾಡಿದೆ. ಅಂದ್ಹಾಗೆ ನೇಪಾಳದಲ್ಲಿ ಈ ರೀತಿ ವಿಮಾನ ದುರಂತಗಳು ಆಗಾಗ ಆಗ್ತಾನೇ ಇರುತ್ವೆ. ಅದ್ರಲ್ಲೂ ಇದೇ ವರ್ಷದ ಆರಂಭದಲ್ಲೇ ಭಾರಿ ದರುಂತವೊಂದು ಸಂಭವಿಸಿತ್ತು. ದುರಂತದಲ್ಲಿ ವಿಮಾನದಲ್ಲಿನದ್ದ 72 ಪ್ರಯಾಣಿಕರು ಹಾಗೂ ಸಿಬ್ಬಂದಿ ಸಾವನ್ನಪ್ಪಿದ್ರು. ಇನ್ನು ನೇಪಾಳ ಪೂರ್ಣ ಪರ್ವತ ಪ್ರದೇಶದಿಂದ ಆವೃತವಾಗಿರೋದ್ರಿಂದ ಅಲ್ಲಿ ನೂರು ಇನ್ನೂರು ಕಿ.ಮೀಗೂ ವಿಮಾನ ಬಳಸ್ಬೇಕಾಗುತ್ತೆ. ಜೊತೆಗೆ ಹೆಚ್ಚಿನ ವಿಮಾನ ನಿಲ್ದಾಣಗಳು ಪರ್ವತ ಪ್ರದೇಶದಲ್ಲಿವೆ ಹಾಗೆ ಅಲ್ಲಿನ ಹವಾಮಾನ ದಿಢೀರ್‌ ಅಂತ ಚೇಂಜ್‌ ಆಗ್ತಿರುತ್ತೆ. ಹೀಗಾಗಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಹಾಗೆ ಹೊಸ ವಿಮಾನ ಖರೀದಿ ಮಾಡ್ದೇ ಇರೋದು, ಮೂಲ ಸೌಕರ್ಯಗಳಲ್ಲಿ ಹೂಡಿಕೆ ಕೊರತೆ, ವಿಮಾನ ನಿಲ್ದಾಣಗಳ ಕಳಪೆ ನಿಯಂತ್ರಣ ಕೂಡ ನೇಪಾಳದಲ್ಲಿನ ವಿಮಾನ ಅಪಘಾತಗಳಿಗೆ ಮುಖ್ಯ ಕಾರಣಗಳಾಗಿವೆ.

-masthmagaa.com

Contact Us for Advertisement

Leave a Reply