ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ಕೇಸ್‌! ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್!‌

masthmagaa.com:

ವಿಮಾನಗಳಲ್ಲಿ ಪ್ಯಾಸೆಂಜೇರ್‌ ಮೇಲೆ ಮೂತ್ರ ವಿಸರ್ಜನೆ ಮಾಡುವ ಖಾಯಿಲೆ ಜಾಸ್ತಿ ಹರಡ್ತಾಇದೆ. ಇದಕ್ಕೆ ಸಂಬಂಧಪಟ್ಟಂತೆ SOP ಮತ್ತು ನಿಯಮಾವಳಿಗಳನ್ನ ಕೋರಿ ಸಲ್ಲಿಸಿದ ಅರ್ಜಿಯ ಮೇರೆಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಕಳೆದ ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದೊಳಗೆ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ 72 ವರ್ಷದ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಕೇಸಲ್ಲಿ ಕೇಂದ್ರ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಗೆ ಸುಪ್ರೀಂ ನೋಟಿಸ್‌ ಕೊಟ್ಟಿದೆ. ಇನ್ನೊಂದ್ಕಡೆ ಆರ್ಥಿಕ ಸಂಕಷ್ಟವನ್ನ ಫೇಸ್‌ ಮಾಡ್ತಿರೋ ಗೋ ಫಸ್ಟ್‌ ಏರ್ಲೈನ್ಸ್‌ಗೆ ಡಿಜಿಸಿಎ ನೋಟಿಸ್‌ ಕೊಟ್ಟಿದೆ. ಮುಂದಿನ ಆದೇಶ ಬರುವತನಕ ಏರ್‌ಲೈನ್ಸ್‌ನಿಂದ ಯಾವುದೇ ಟಿಕೆಟ್‌ ಮಾರಾಟ ಮಾಡಬಾರದು ಅಂತ ಹೇಳಿದೆ.

-mathmagaa.com

Contact Us for Advertisement

Leave a Reply