ಬದುಕಿದ್ದಾನ ಉಗ್ರ ಝವಾಹಿರಿ! ವಿಡಿಯೋ ರಿಲೀಸ್‌ ಮಾಡಿದ ಅಲ್ಖೈದ!

masthmagaa.com:

ಏಕ್ಯೂ ಸಂಘಟನೆಯ ಮುಖ್ಯಸ್ಥ ಉಗ್ರ ಅಯ್ಮಾನ್‌ ಅಲ್‌ ಜವಾಹಿರಿದು ಎನ್ನಲಾದ 35 ನಿಮಿಷದ ವಿಡಿಯೋ ಒಂದನ್ನ ಎಕ್ಯೂ ಉಗ್ರ ಸಂಘಟನೆ ಬಿಡುಗಡೆ ಮಾಡಿದೆ. ಈ ಉಗ್ರನನ್ನ ಇದೇ ವರ್ಷ ಜುಲೈ 31ರಂದು ಡ್ರೋನ್‌ ದಾಳಿ ಮಾಡಿ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಹತ್ಯೆ ಮಾಡಲಾಗಿದೆ ಅಂತ ಅಮೆರಿಕ ಹೇಳಿತ್ತು. ಆದ್ರೆ ಆತ ಬದುಕಿದ್ದಾನೆ ಅನ್ನೋ ರೀತಿಯಲ್ಲಿ ಅಲ್ಖೈದ ತಮ್ಮ ನಾಯಕನ ವಿಡಿಯೋವನ್ನ ರಿಲೀಸ್‌ ಮಾಡಿದೆ. ಆದ್ರೆ ಈ ವಿಡಿಯೋ ಯಾವಗಿಂದು ಅನ್ನೋದಕ್ಕೆ ಯಾವುದೇ ಮಾಹಿತಿಯಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. 1998ರಲ್ಲಿ ಹಾಗೂ 2001ರಲ್ಲಿ ಅಮೆರಿಕ ವಿರುದ್ದ ನಡೆದ ದಾಳಿಗೆ ಪ್ರತಿಯಾಗಿ ಅಮೆರಿಕ ಬಿನ್‌ ಲಾಡೆನ್‌ ಅನ್ನ 2011ರಲ್ಲಿ ಹೊಡೆದು ಹಾಕಿತ್ತು. ಅದಾದ್ಮೇಲೆ ಜವಾಹಿರಿಗಾಗಿ ಅಮೆರಿಕ ಕಾರ್ಯಾಚರಣೆ ನಡೆಸಿತ್ತು. ಜುಲೈ 31ರಂದು ನಾವು ಜವಾಹಿರಿಯನ್ನ ಹತ್ಯೆ ಮಾಡಿದ್ದೇವೆ ಅಂತ ಬೈಡೆನ್‌ ಅಧಿಕೃತವಾಗಿ ಹೇಳಿಕೆ ಕೊಟ್ಟಿದ್ರು . ಆದ್ರೆ ಈಗ ಉಗ್ರನ ವಿಡಿಯೋ ಬಿಡುಗಡೆಯಾಗಿರೋದು ಸಾಕಷ್ಟು ಸಂಚಲನ ಹುಟ್ಟುಹಾಕಿದೆ.

-masthmagaa.com

Contact Us for Advertisement

Leave a Reply