ಮದ್ಯ ಪ್ರಿಯರಿಗೆ ಚುನಾವಣಾ ಬಿಸಿ! ಮೇ 8 ರಿಂದ ಚುನಾವಣೆ ಮುಗಿಯೋ ತನಕ ಮದ್ಯ ನಿಷೇಧ!

masthmagaa.com:

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿವೆ. ಇದೀಗ ಚುನಾವಣೆ ಬಿಸಿ ಮದ್ಯ ಪ್ರಿಯರಿಗೆ ತಟ್ಟಲಿದೆ. ಚುನಾವಣಾ ಹಿನ್ನೆಲೆ ರಾಜ್ಯದಲ್ಲಿ ಮೇ 8ರ ಮಧ್ಯ ರಾತ್ರಿಯಿಂದ ಮೇ10ರ ಮಧ್ಯ ರಾತ್ರಿಯವರೆಗೂ ಮದ್ಯ ಅಂಗಡಿಗಳನ್ನ ಬಂದ್‌ ಮಾಡೋಕೆ ನಿರ್ದೇಶಿಸಲಾಗಿದೆ. ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿರ್ಬಂಧ ಹೇರಲಾಗಿದೆ. ರಾಜ್ಯದಲ್ಲಿ ಅಷ್ಟೇ ಅಲ್ದೇ ಪಕ್ಕದ ಕೇರಳ, ಆಂಧ್ರ ಪ್ರದೇಶ, ಗೋವಾ, ತಮಿಳುನಾಡಿನ ಗಡಿ ಭಾಗಗಳ ಪ್ರದೇಶಗಳಿಗೂ ಈಗಾಗಲೇ ಡ್ರೈ ಡೇಗೆ ಅಂದ್ರೆ ಮದ್ಯ ಮಾರಾಟ ನಿಷೇಧಿಸಿ ಅಬಕಾರಿ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಬಾರ್, ರೆಸ್ಟೋರೆಂಟ್, ರಿಟೇಲ್ ಮಾರಾಟ ಮಳಿಗೆಗಳ ಮೇಲೆ ನಿಗಾ ಇಡಲಾಗಿದ್ದು, ಈಗಾಗಲೇ ಮದ್ಯ ಮಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ಸೂಚನೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply