ಚುನಾವಣೆಯಲ್ಲಿ ಪುಟಿನ್‌ನ ಸೋಲಿಸಲು ರೆಡಿಯಾಗಿದೆ ಪ್ಲಾನ್‌: ಅಲೆಕ್ಸಿ ನವಲ್ನಿ

masthmagaa.com:

2024ರ ರಷ್ಯಾ ಅಧ್ಯಕ್ಷೀಯ ಚುನಾವಣೆ ಹಿನ್ನಲೆ ಇದೀಗ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವ್ರ ಕ್ಯಾಂಪ್‌ ಪುಟಿನ್‌ ವಿರುದ್ಧ ಭರ್ಜರಿ ಪ್ಲಾನ್‌ ಹಾಕಿದೆ. ʻನಮ್ಮ ಸ್ವಂತ ಕ್ಯಾಂಡಿಡೇಟ್‌ ಅಂತು ಇಲ್ಲ. ಯಾಕಂದ್ರೆ ಅವ್ರನ್ನ ಜೈಲ್‌ ಒಳಗೆ ಹಾಕಿದ್ದಾರೆ. ಆದ್ರಿಂದ ಪುಟಿನ್‌ ಬಿಟ್ಟು ಅವ್ರ ವಿರುದ್ಧ ನಿಂತಿರೋ ಬೇರೆ ಯಾವ ಕ್ಯಾಂಡಿಡೇಟ್ಸ್‌ ಆದ್ರು ಅವ್ರಿಗೆ ವೋಟ್‌ ಹಾಕೋ ಪರ ಕ್ಯಾಂಪೇನ್‌ ನಡೆಸ್ತೀವಿ. ಪುಟಿನ್‌ ವಿರುದ್ಧ ವೋಟ್‌ ಹಾಕಲು ರಷ್ಯಾ ಜನರಿಗೆ ಪ್ರೇರೇಪಿಸ್ತೀವಿ. ಈ ಕ್ಯಾಂಪೇನ್‌ನಲ್ಲಿ ರಷ್ಯಾ-ಯುಕ್ರೇನ್‌ ಯುದ್ಧ ಸ್ಟಾರ್ಟ್‌ ಆಗೋ ಮೊದಲೇ ರಷ್ಯಾವನ್ನ ಬಿಟ್ಟು ಹೋದ ಸಾವಿರಾರು ಜನರ ಸಹಾಯ ಪಡಿತೀವಿ. ಇವ್ರಿಗೆ ಚುನಾವಣೆಯಲ್ಲಿ ಪುಟಿನ್‌ ವಿರುದ್ಧ ವೋಟ್‌ ಹಾಕೋಕೆ ಕಾಲ್‌ ಮಾಡಿ ತಿಳಿಸ್ತೀವಿʼ ಅಂತ ಅಲೆಕ್ಸಿ ನವಲ್ನಿ ಅವ್ರ ಒಡನಾಡಿಯೊಬ್ರು ಹೇಳಿದ್ದಾರೆ. ಜೊತೆಗೆ ʻಪುಟಿನ್‌ನ ಸೋಲಿಸೋದಕ್ಕಂತು ಸಾಧ್ಯಯಿಲ್ಲ. ಆದ್ರೆ ನಮ್ಮ ಕ್ಯಾಂಪೇನ್‌ನ ಗುರಿ ಒಂದೇ ರಷ್ಯಾದ ರಾಜಕೀಯ ಅಜೆಂಡಾವನ್ನ ಬದಲಾಯಿಸೋದುʼ ಅಂತಾನೂ ಹೇಳಿದ್ದಾರೆ. ಅಂದ್ಹಾಗೆ 2024 ರಲ್ಲಿ ರಷ್ಯಾ ಚುನಾವಣೆ ನಡೆಯಲಿದೆ.

-masthmagaa.com

Contact Us for Advertisement

Leave a Reply