ರಷ್ಯಾ ಜೈಲಿನಲ್ಲಿ ಪುಟಿನ್‌ ಬೆಂಬಲಿತ ಹಾಡು ಕೇಳೋಕೆ ಟಾರ್ಚರ್‌!

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ನ ಎದುರು ಹಾಕೊಂಡಿದ್ದ ಮಾಜಿ ವಕೀಲ ಅಲೆಕ್ಸಿ ನವಲ್ನಿಯ ಬದುಕು ಪುಟಿನ್‌ನ ಕುತಂತ್ರದಿಂದಲೇ ಸುತ್ತುವರೆದಿದೆ. ಈ ಹಿಂದೆ ರಷ್ಯಾ ಜೈಲಿನಿಂದ ಅಲೆಕ್ಸಿ ನವಲ್ನಿ ಕಾಣೆಯಾಗಿದ್ದಾರೆ ಅನ್ನೋ ಮಾತು ಹರಿದಾಡುತ್ತಿರುವಾಗ್ಲೇ, ದಿಢೀರ್‌ ಅಂತ ರಷ್ಯಾದ ಉತ್ತರ ಭಾಗದಲ್ಲಿರೋ ʻದಿ ಪೋಲಾರ್‌ ವುಲ್ಫ್‌ʼ ಅನ್ನೋ ಸ್ಪೆಷಲ್‌ ಜೈನಲ್ಲಿ ಪ್ರತ್ಯಕ್ಷವಾಗಿದ್ರು. ಸದ್ಯ ಅದೇ ಜೈಲಿನಲ್ಲಿರೋ ಅಲೆಕ್ಸಿ ಇದೀಗ ತಮ್ಮ ವಿಚಿತ್ರ ಮಾರ್ನಿಂಗ್‌ ರುಟಿನ್‌ ಬಗ್ಗೆ ಹೇಳ್ಕೊಂಡಿದ್ದಾರೆ. ಅದೇನಂದ್ರೆ, ಪ್ರತಿದಿನ ಬೆಳಗ್ಗೆ 5 ಗಂಟೆಗೆ ಪುಟಿನ್‌ ಬೆಂಬಲಿತ ಪಾಪ್‌ ಸಿಂಗರ್‌ನ ಹಾಡು ಕೇಳೋಕೆ ಅಲೆಕ್ಸಿಗೆ ಫೋರ್ಸ್‌ ಮಾಡಲಾಗ್ತಿದೆ ಅಂತೆ. ಬೆಳಿಗ್ಗೆ ಎದ್ದ ತಕ್ಷಣ ಮೊದಲಿಗೆ ರಷ್ಯಾದ ರಾಷ್ಟ್ರಗೀತೆಯನ್ನ ಪ್ಲೇ ಮಾಡ್ತಾರಂತೆ. ಅದಾದ ತಕ್ಷಣವೇ ʻಐ ಎಮ್‌ ರಷ್ಯನ್‌ʼ (I am Russian) ಅನ್ನೋ ರಷ್ಯಾದ ಬಹುಮುಖ್ಯವಾದ ಹಾಡನ್ನ ಪ್ಲೇ ಮಾಡಲಾಗುತ್ತಂತೆ. ಅಂದ್ಹಾಗೆ ಈ ಹಾಡನ್ನ ರಷ್ಯಾದ ಗಾಯಕ ಶಾಮನ್‌ ಅನ್ನೋರು ಹಾಡಿರೋದು. ಈತ ಅಧ್ಯಕ್ಷ ಪುಟಿನ್‌ನ ಪ್ರಮುಖ ಗಾಯಕ, ಅವ್ರಿಗೆ ಬಹಳ ಹತ್ರದವನು ಅಂತ ಅಲೆಕ್ಸಿ ಹೇಳಿದ್ದಾರೆ. ಅಂದ್ಹಾಗೆ ಒಂದು ಟೈಮಲ್ಲಿ ಬಹಳ ಜನಪ್ರಿಯತೆ ಪಡೆದಿದ್ದ ಇವ್ರನ್ನ, ರಾಜಕೀಯದಿಂದ ದೂರವಿಡೋಕೆ ಜೈಲಿಗೆ ಕಳಿಸಲಾಗಿದೆ ಅಂತ ನವಲ್ನಿ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply