ಕೊರೊನಾ ವೈರಸ್‌ ಮೂಲದ ಕುರಿತ ಮಾಹಿತಿಯನ್ನ ನಮಗೆ ನೀಡಿ ಎಂದ WHO ಮುಖ್ಯಸ್ಥ!

masthmagaa.com:

ಅಮೆರಿಕದ ಇಂಧನ ಇಲಾಖೆ ಕೋವಿಡ್‌ ವೈರಸ್‌ ಚೀನಾದ ಲ್ಯಾಬ್‌ನಿಂದ ಲೀಕ್‌ ಆಗಿದೆ ಅಂತ ವರದಿ ನೀಡಿದ್ದೇ ತಡ ಕೊರೊನಾ ವೈರಸ್‌ನ ಮೂಲದ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಯಾವುದೇ ರಾಷ್ಟ್ರ ಕೋವಿಡ್‌ ಪ್ಯಾಂಡೆಮಿಕ್‌ನ ಮೂಲದ ಬಗ್ಗೆ ಮಾಹಿತಿ ಹೊಂದಿದ್ರೆ ಅದನ್ನ WHO ಮುಂದೆ ಸಬ್‌ಮಿಟ್‌ ಮಾಡಿ ಅಂತ WHO ನಿರ್ದೇಶಕ ಟೆಡ್ರೊಸ್‌ ಅಧಾನೋಮ್‌ ಹೇಳಿದ್ದಾರೆ. ಜೊತೆಗೆ ಈ ವಿಚಾರವಾಗಿ ಯಾರ ಮೇಲೂ ಆರೋಪ ಮಾಡಬಾರದು. ಅದರ ಬದಲು ಈ ಪ್ಯಾಂಡೆಮಿಕ್‌ ಹೇಗೆ ಪ್ರಾರಂಭವಾಯ್ತು ಅನ್ನೋದನ್ನ ತಿಳಿದುಕೊಂಡ್ರೆ, ಮುಂದೆ ಬರುವ ಈ ರೀತಿಯ ಸಾಂಕ್ರಾಮಿಕ ರೋಗಗಳನ್ನ ತಡೆಯೋದಕ್ಕೆ ಸಹಾಯವಾಗ್ಬೋದು. ಜೊತೆಗೆ ಕೋವಿಡ್‌ ಮೂಲವನ್ನ ಪತ್ತೆಹಚ್ಚುವ ಯಾವ ಪ್ಲ್ಯಾನ್‌ ಅನ್ನೂ WHO ಕೈಬಿಟ್ಟಿಲ್ಲ ಅಂತ ಅಧಾನೋಮ್‌ ಹೇಳಿದ್ದಾರೆ. ಅಲ್ದೆ ಈ ವಿಚಾರವಾಗಿ ತಮ್ಮ ಬಳಿ ಇರೋ ಮಾಹಿತಿಯನ್ನ ನೀಡುವಂತೆ ಅಮೆರಿಕದ ಬಳಿ ಈಗಾಗಲೇ ಕೇಳಲಾಗಿದೆ. ಈ ಮಾಹಿತಿ ಶೇರ್‌ ಮಾಡೋದು ತುಂಬಾ ಅಗತ್ಯವಾಗಿದೆ, ಇದ್ರಿಂದ ಮುಂದಿನ ವೈಜ್ಞಾನಿಕ ಅಧ್ಯಯನಕ್ಕೆ ಸಹಾಯವಾಗಲಿದೆ ಅಂತ WHO ಕೋವಿಡ್‌-19 ಟೆಕ್ನಿಕಲ್‌ ಲೀಡ್‌ ಮರಿಯಾ ವಾನ್‌ ಕೆರ್ಖೋವ್‌ ಹೇಳಿದ್ದಾರೆ. ಅಂದ್ಹಾಗೆ ಕೊರೊನಾ ವೈರಸ್‌ ಚೀನಾದ ಲ್ಯಾಬ್‌ನಿಂದ ಲೀಕ್‌ ಆಗಿದೆ ಅಂತ ಅಮೆರಿಕದ FBI ಚೀಫ್‌ ಹೇಳಿದ್ರು. ಇದನ್ನ ಚೀನಾ ತಳ್ಳಿ ಹಾಕಿತ್ತು.

-masthmagaa.com

Contact Us for Advertisement

Leave a Reply