ದೆಹಲಿ ಕಳಪೆ ಗಾಳಿ ಗುಣಮಟ್ಟ: ಶಾಲೆಗಳಿಗೆ 2 ದಿನ ರಜೆ!

masthmagaa.com:

ದೆಹಲಿಯಲ್ಲಿ ಗಾಳಿ ಗುಣಮಟ್ಟ ತೀವ್ರ ಹದಗೆಟ್ಟಿರೋ ಕಾರಣದಿಂದ ದೆಹಲಿಯ ಶಾಲೆಗಳಿಗೆ 2 ದಿನಗಳ ರಜೆಯನ್ನ ಘೋಷಿಸಲಾಗಿದೆ. ಈ ಕುರಿತು `X’ನಲ್ಲಿ ಪೋಸ್ಟ್‌ ಮಾಡಿರೋ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ʻದೆಹಲಿಯಲ್ಲಿ ಮಾಲಿನ್ಯ ಹೆಚ್ಚುತ್ತಿರೋ ಕಾರಣದಿಂದ ದೆಹಲಿಯ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳಿಗೆ ಮುಂದಿನ 2 ದಿನ ರಜೆ ಘೋಷಿಸಿಲಾಗಿದೆʼ ಅಂತ ತಿಳಿಸಿದ್ದಾರೆ. ಅಂದ್ಹಾಗೆ ದೆಹಲಿಯಲ್ಲಿ ಗುರುವಾರದಂದು ಅಂದ್ರೆ ನೆನ್ನೆ ದಟ್ಟವಾದ ಮಸುಕು ಆವರಿಸಿತ್ತು. ಇದ್ರಿಂದ ಉಸಿರಾಟದ ಸಮಸ್ಯೆ ಹೆಚ್ಚಾಗಬಹುದು ಅಂತ ದೆಹಲಿ ಡಾಕ್ಟರ್ಸ್‌ ಎಚ್ಚರಿಕೆಯನ್ನ ನೀಡಿದ್ರು. ಇದ್ರೊಂದಿಗೆ ಮುಂದಿನ ಎರಡು ವಾರಗಳಲ್ಲಿ ದೆಹಲಿಯ ಮಾಲಿನ್ಯ ಇನ್ನಷ್ಟು ಹೆಚ್ಚಾಗಬಹುದು ಅಂತ ವಿಜ್ಞಾನಿಗಳು ಕೂಡ ವಾರ್ನಿಂಗ್‌ನ್ನ ನೀಡಿದ್ರು.

-masthmagaa.com

Contact Us for Advertisement

Leave a Reply