ಸಂಪೂರ್ಣ ಮಹಿಳೆಯರಿಂದ ಕೂಡಿರಲಿದೆ 2024ರ ಗಣರಾಜ್ಯೋತ್ಸವದ ಪರೇಡ್‌!

masthmagaa.com:

ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ ಸಂಪೂರ್ಣ ಮಹಿಳೆಯರಿಂದಲೇ ನಡೆಸೋಕೆ ಯೋಜಿಸಲಾಗಿದೆ. ಈ ಕುರಿತು ಮೊದಲ ಹಂತದ ಮಾತುಕತೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. 2024ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಾಯುಸೇನೆ, ಭೂ ಸೇನಾ, ನೌಕಾ ಸೇನೆ ಮಾತ್ರವಲ್ಲ, ಅಶ್ವದಳ ಸೇರಿದಂತೆ ಇನ್ನಿತರ ಎಲ್ಲಾ ದಳಗಳ ಮಹಿಳಾ ಪ್ರತಿನಿಧಿಗಳಿಂದಲೇ ಪರೇಡ್ ನಡೆಯಲಿದೆ. ಸ್ಧಬ್ದ ಚಿತ್ರ ಪ್ರದರ್ಶನ, ಮ್ಯೂಸಿಕ್ ಬ್ಯಾಂಡ್ ಸೇರಿದಂತೆ ಎಲ್ಲವೂ ಮಹಿಳಾ ತುಕಡಿಗಳನ್ನೇ ಹೊಂದಿರಲಿದೆ. ಯೋಜನೆ ಕುರಿತು ಗೃಹ, ಸಂಸ್ಕೃತಿ ಮತ್ತು ನಗರಾಭಿವೃದ್ಧಿ ಸಚಿವಾಲಯಗಳಿಗೆ ಮಾಹಿತಿ ನೀಡಲಾಗಿದೆ ಅಂತ ಅಧಿಕಾರಿಯೊಬ್ರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply