ಟಾಟಾ ಜೊತೆ ರಿಲಯನ್ಸ್‌ ಡೀಲ್‌! ಟಾಟಾ ಪ್ಲೇ ಶೇರ್‌ ಖರೀದಿಗೆ ಪ್ಲಾನ್‌!

masthmagaa.com:

ಭಾರತದ ಬ್ಯುಸಿನೆಸ್‌ ಲೋಕದ ಮದಗಜಗಳಾದ ಟಾಟಾ ಗ್ರೂಪ್‌ ಮತ್ತು ರಿಲಾಯನ್ಸ್‌ ಸಮಾಗಮಕ್ಕೆ ವೇದಿಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಟಾಟಾ ಮತ್ತು ಅಂಬಾನಿ ಜಂಟಿ ಕಂಪನಿಯೊಂದರಲ್ಲಿ ಹೂಡಿಕೆ ಮಾಡ್ಬಹುದು ಅಂತ ಹೇಳಲಾಗ್ತಿದೆ. ʻಟಾಟಾ ಪ್ಲೇʼನಲ್ಲಿ 30% ಶೇರುಗಳನ್ನ ಖರೀದಿಸೋದಕ್ಕೆ ರಿಲಾಯನ್ಸ್‌ ಇಂಡಸ್ಟ್ರೀಸ್‌ ಮುಂದಾಗಿದೆ ಅಂತ ವರದಿಯಾಗಿದೆ. ಈ ಹಿಂದೆ ಇದ್ದ ಟಾಟಾ ಸ್ಕೈ DTH ಕಂಪನಿನೇ ಈಗ ಟಾಟಾ ಪ್ಲೇ ಆಗಿದೆ. ಇದ್ರಲ್ಲಿ ಪ್ರಮೋಟರ್‌ ಕಂಪನಿ ಟಾಟಾ ಸನ್ಸ್‌ 50.2% ಶೇರ್‌ ಹೊಂದಿದ್ರೆ, ಡಿಸ್ನಿ ಇಂಡಿಯಾ 29.8% ಹಾಗೆ ಸಿಂಗಪೂರ್‌ನ ಟೆಮಸಕ್‌ (Temasek) 20% ಶೇರು ಹೊಂದಿದೆ. ಈಗ ಡಿಸ್ನಿ ಇಂಡಿಯಾನ ಮರ್ಜ್‌ ಮಾಡ್ಕೊಳ್ತಿರೋ ಅಂಬಾನಿ, ಅದ್ರ ಟಾಟಾ ಪ್ಲೇ ಶೇರುಗಳನ್ನ ಕೂಡ ತಗೊಳೋಕೆ ನೋಡ್ತಿದೆ. ಈ ಮೂಲಕ ಭಾರತದ ಟೆಲಿವಿಷನ್‌ ಡಿಸ್ಟ್ರಿಬ್ಯೂಷನ್‌ ಕ್ಷೇತ್ರಕ್ಕೂ ಕೈ ಹಾಕೋಕೆ ನೋಡ್ತಿದ್ದಾರೆ. ಅಲ್ಲದೇ ತಮ್ಮ ಜಿಯೋ ಸಿನಿಮಾ OTTಯನ್ನ ಕೂಡ ಭದ್ರ ಪಡಿಸೋಕೆ ನೋಡ್ತಿದ್ದಾರೆ. ಜಿಯೋ ಸಿನಿಮಾಗೆ ಟಾಟಾ ಪ್ಲೇನ ಗ್ರಾಹಕರು ಸಿಗಲಿದ್ದಾರೆ. ಒಂದ್ವೇಳೆ ಈ ಡೀಲ್‌ ಫೈನಲ್‌ ಆಯ್ತು ಅಂದ್ರೆ ರಿಲಾಯನ್ಸ್‌ ತನ್ನ ಜಿಯೋ ಸಿನಿಮಾದ ಸಂಪೂರ್ಣ ಕಂಟೆಂಟ್‌ನ್ನ ಟಾಟಾ ಪ್ಲೇನಲ್ಲಿ ಹಾಕೋಕೆ ತಯಾರಾಗಿದ್ಯಂತೆ. ಆದ್ರೆ ಟಾಟಾ ಪ್ಲೇ ದೊಡ್ಡ ಮಾರ್ಕೆಟ್‌ ಶೇರ್‌ ಹೊಂದಿದ್ರು OTT ಪ್ಲಾಟ್‌ಫಾರ್ಮ್‌ಗಳಿಂದ ಸವಾಲುಗಳನ್ನ ಎದುರಿಸ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 105 ಕೋಟಿ ಲಾಸ್‌ ಅನುಭವಿಸಿತ್ತು. ಈಗ ಅಂಬಾನಿ ಬಂದು ಏನ್‌ ಮಾಡ್ತಾರೋ ನೋಡ್ಬೇಕಿದೆ.

-masthmagaa.com

Contact Us for Advertisement

Leave a Reply