ಇರಾನ್‌ ಮತ್ತೆ ದಳಿ ಮಾಡಿದ್ರೆ ಸುಮ್ಮನಿರಲ್ಲ! ಅಮೆರಿಕ ಪುನಃ ಎಚ್ಚರಿಕೆ!

masthmagaa.com:

ಕಳೆದ ಎರಡು ದಿನಗಳಲ್ಲಿ ಇರಾಕ್‌, ಸಿರಿಯಾ ಮತ್ತು ಯೆಮೆನ್‌ನಲ್ಲಿರೋ ಇರಾನ್‌ ಪ್ರಾಕ್ಸಿ ಗುಂಪುಗಳ ಮೇಲೆ ದಾಳಿ ನಡೆಸಿರೋ ಅಮೆರಿಕ ಈಗ ಮತ್ತೆ ವಾರ್ನ್‌ ಮಾಡಿದೆ. ಮತ್ತೊಮ್ಮೆ ಬಾಲ ಬಿಚ್ಚಿ ದಾಳಿ ನಡೆಸಿದ್ರೆ ಇದೇ ರೀತಿ ಪ್ರತಿದಾಳಿ ಮಾಡ್ತೀವಿ ಅಂತ ಇರಾನ್‌ ಬೆಂಬಲಿತ ಬಂಡುಕೋರರಿಗೆ ಎಚ್ಚರಿಗೆ ನೀಡಿದೆ. ʻನಮ್ಮ ಪಡೆಗಳ ಮೇಲೆ ದಾಳಿ ನಡೆಸಿದ್ರೆ, ನಮ್ಮ ಜನರ ಹತ್ಯೆಯಾದ್ರೆ ನಾವು ಸುಮ್ಮನಿರಲ್ಲ. ಹೆಚ್ಚಿನ ಆ್ಯಕ್ಷನ್‌ ತಗೊಂಡು ದಾಳಿ ನಡೆಸೋದನ್ನ ಕಂಟಿನ್ಯೂ ಮಾಡ್ತೀವಿʼ ಅಂತ ಅಮೆರಿಕದ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವನ್‌ ಹೇಳಿಕೆ ನೀಡಿದ್ದಾರೆ. ಇನ್ನೊಂದ್ಕಡೆ ಇಸ್ರೇಲ್‌-ಹಮಾಸ್‌ ವಿಚಾರವಾಗಿ ಇದೀಗ ಕೆನಡಾ ಗುಡುಗಿದೆ. ʻವೆಸ್ಟ್‌ ಬ್ಯಾಂಕ್‌ನಲ್ಲಿ ಬೀಡುಬಿಟ್ಟು, ಅಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸ್ತಿರೋ ಇಸ್ರೇಲಿ ಸಟಲರ್ಸ್‌ಗೆ ನಿರ್ಬಂಧ ಹೇರ್ತೀವಿ. ಜೊತೆಗೆ ಹಮಾಸ್‌ ನಾಯಕರ ಮೇಲೂ ಹೊಸ ನಿರ್ಬಂಧಗಳನ್ನ ಹೇರ್ತೀವಿ’ ಅಂತ ಕೆನಡಾ ವಿದೇಶಾಂಗ ಸಚಿವೆ ಮೆಲನಿ ಜೋಲಿ ಎಚ್ಚರಿಕೆ ನೀಡಿದ್ದಾರೆ. ಅಂದ್ಹಾಗೆ ಕೆಲ ದಿನಗಳ ಹಿಂದಷ್ಟೇ ಅಮೆರಿಕ ಕೂಡ ಇದೇ ರೀತಿ 4 ಮಂದಿ ಇಸ್ರೇಲಿ ಸೆಟಲರ್ಸ್‌ ಮೇಲೆ ನಿರ್ಬಂಧ ಹೇರಿದೆ. ಅಲ್ಲದೆ ಶಾಂತಿ ಕದಡೋ ವ್ಯಕ್ತಿಗಳು ಕಂಡುಬಂದ್ರೆ ಅಂತವರ ಮೇಲೂ ನಿರ್ಬಂಧ ಹೇರೋದಾಗಿ ಹೇಳಿದೆ.

-masthmagaa.com

Contact Us for Advertisement

Leave a Reply