ತೈಲ ಬೆಲೆ ಏರಿಕೆಗೆ ಬೈಡೆನ್‌ ಪುಟಿನ್‌ ಇಬ್ಬರೂ ಕಾರಣ : ಅಮೆರಿಕಾದ ಜನ

masthmagaa.com:

ಜಾಗತಿಕ ತೈಲ ಬೆಲೆ ಏರಿಕೆ ಸಂಬಂಧ ಅಮೆರಿಕಾದ ABC ನ್ಯೂಸ್‌ ತನ್ನ ದೇಶದಲ್ಲಿ ಸಮೀಕ್ಷೆ ಕೈಗೊಂಡಿದೆ. ಇದರಲ್ಲಿ ತೈಲ ಬೆಲೆ ಈ ಪರಿ ಏರಿಕೆಯಾಗೋಕೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ ಹಾಗು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೇ ಕಾರಣ ಅಂತ ಹೆಚ್ಚಿನ ಜನರಿಂದ ಅಭಿಪ್ರಾಯ ವ್ಯಕ್ತವಾಗಿದೆ. 51 ಪರ್ಸೆಂಟ್‌ ಜನ ಬೈಡೆನ್ ಕಾರಣ ಅಂದ್ರೆ, 71 ಪರ್ಸೆಂಟ್‌ ಜನ ಬೈಡೆನ್‌ ಜೊತೆಗೆ ಪುಟಿನ್‌ ಕೂಡ ಕಾರಣ ಅಂತ ಹೇಳಿದ್ದಾರೆ. ಇನ್ನು ಕೆಲವರು ಆಯಿಲ್‌ ಕಂಪನಿಗಳು, ಬೈಡೆನ್‌ ಮತ್ತು ಅವರ ಡೆಮಾಕ್ರೆಟಿಕ್‌ ಪಕ್ಷ, ರಷ್ಯಾ ಅಧ್ಯಕ್ಷ ಪುಟಿನ್‌ ಹೀಗೆ ಎಲ್ರೂ ಕಾರಣ ಅಂತ ಹೇಳಿರೋದಾಗಿ ABC ವರದಿ ಮಾಡಿದೆ.

-masthmagaa.com

Contact Us for Advertisement

Leave a Reply