ಇಫ್ತಾರ್‌ ಕೂಟದಲ್ಲಿ ಭಾಗಿಯಾದ ಬಿಹಾರ ಸಿಎಂ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷಗಳು!

masthmagaa.com:

ಬಿಹಾರದಲ್ಲಿ ರಾಮನವಮಿ ಆಚರಣೆ ವೇಳೆ ಉಂಟಾಗಿದ್ದ ಕೋಮುಗಲಭೆ ಇನ್ನೂ ನಿಂತಿಲ್ಲ. ಇದ್ರ ನಡುವೆಯೇ ಬಿಹಾರ್‌ ಸಿಎಂ ನಿತೀಶ್‌ ಕುಮಾರ್‌ ಅವ್ರು ಇಫ್ತಾರ್‌ ಕೂಟ ಅಂದ್ರೆ ರಂಜಾನ್‌ ಸಮಯದಲ್ಲಿ ದಿನದ ಅಂತ್ಯದಲ್ಲಿ ಮಾಡುವ ಔತಣ ಕೂಟದಲ್ಲಿ ಭಾಗಿಯಾಗಿರೋದು ವಿರೋಧ ಪಕ್ಷಗಳ ಸಿಟ್ಟಿಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌, ನಿತೀಶ್‌ ಅವ್ರು ವೋಟ್‌ ಸಲುವಾಗಿ ಬಿಹಾರವನ್ನ ಇಸ್ಲಾಮಿಕ್‌ ರಾಜ್ಯವನ್ನಾಗಿ ಬದ್ಲಾಯಿಸ್ಬೇಕು ಅನ್ಕೊಂಡಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಇತ್ತ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ ಕೂಡ ನಿತೀಶ್‌ ಮೇಲೆ ಮುಗಿಬಿದ್ದಿದ್ದು, ನಿತೀಶ್‌ ಈಗಾಗಲೇ ಆಡಳಿತದ ಜೊತೆಗಿನ ತಮ್ಮ ಸಂಪರ್ಕವನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ಅವ್ರು ಇಫ್ತಾರ್‌ಗೆ ಅಟೆಂಡ್‌ ಆಗಿದ್ರಲ್ಲಿ ತಪ್ಪೇನಿಲ್ಲ ಅಂತ ಕಾಲೆಳೆದಿದ್ದಾರೆ. ಇನ್ನೊಂದ್‌ ಕಡೆ ಬಿಹಾರದಲ್ಲಿ ಉಂಟಾದ ಕೋಮು ಗಲಭೆಯನ್ನ ತಡೆಯುವಲ್ಲಿ ನಿತೀಶ್‌ ಕುಮಾರ್‌ ಸರ್ಕಾರ ವಿಫಲವಾಗಿದೆ ಅಂತ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಆರೋಪಿಸಿದ್ದಾರೆ. ನಿತೀಶ್‌ ಅವ್ರಿಗೆ ಯಾವುದೇ ರೀತಿ ಕನಿಕರ ಇಲ್ಲ ಒಂದು ಸಮುದಾಯವನ್ನ ಟಾರ್ಗೆಟ್‌ ಮಾಡಲಾಗ್ತಿದೆ ನಾನು ಸರ್ಕಾರವನ್ನ ಖಂಡಿಸುತ್ತೇನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply