ಜಿ7 ಸಭೆಗೆ ಚೀನಾ ಟಕ್ಕರ್:‌ ಮಧ್ಯ ಏಷ್ಯಾ ರಾಷ್ಟ್ರಗಳ ಜೊತೆ ಮೀಟಿಂಗ್

masthmagaa.com:

ಜಪಾನ್‌ನಲ್ಲಿ ನಡಿತಾಯಿರೊ ಜಿ7 ಶೃಂಗಸಭೆಗೆ ಟಕ್ಕರ್‌ ಕೊಡೋಕೆ ಮಧ್ಯ ಏಷ್ಯಾದ 5 ರಾಷ್ಟ್ರಗಳ ಜೊತೆ ತನ್ನದೇ ಆದ ಶೃಂಗಸಭೆಯನ್ನ ಚೀನಾ ಆಯೋಜಿಸಿದೆ. ಅಮೆರಿಕದ ಪ್ರಾಬಲ್ಯವಿರೊ ಜಗತ್ತನ್ನ ಎದುರಿಸೋಕೆ ಸಮಾನಮನಸ್ಕ ರಾಷ್ಟ್ರಗಳ ಜೊತೆ ಆರ್ಥಿಕ ಹಾಗೂ ರಾಜಕೀಯ ಸಂಬಂಧಗಳನ್ನ ಗಟ್ಟಿಗೊಳಿಸುವ ಉದ್ದೇಶದೊಂದಿಗೆ ಈ ಸಭೆ ನಡೆಸಲಾಗ್ತಿದೆ. ಚೀನಾದ ಶಿಯಾನ್‌ ನಗರದಲ್ಲಿ ಸಭೆ ಆಯೋಜಿಸಲಾಗಿದ್ದು, ಕಜಕಿಸ್ತಾನ್‌, ತಜಕಿಸ್ತಾನ್‌, ಕಿರ್ಗಿಸ್ತಾನ್‌, ಉಜ್ಬೇಕಿಸ್ತಾನ್‌ ಹಾಗೂ ತುರ್ಕ್‌ಮೇನಿಸ್ತಾನ್‌ ರಾಷ್ಟ್ರಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಭೆಯಲ್ಲಿ ಪ್ರಮುಖ ರಾಜಕೀಯ ಡಾಕುಮೆಂಟ್‌ಗಳಿಗೆ ಸಹಿ ಹಾಕಲಾಗುತ್ತೆ ಅಂತ ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಆದ್ರೆ ಡಾಕುಮೆಂಟ್‌ಗಳು ಯಾವ ವಿಷಯವನ್ನ ಒಳಗೊಂಡಿರುತ್ತವೆ ಅನ್ನೊದನ್ನ ರಿವೀಲ್‌ ಮಾಡಿಲ್ಲ. ಅಂದ್ಹಾಗೆ ಈ ಮಧ್ಯ ಏಷ್ಯಾ ರಾಷ್ಟ್ರಗಳ ಮೇಲೆ ರಷ್ಯಾದ ಇನ್‌ಫ್ಲುಯೆನ್ಸ್‌ ಬಹಳ ಹಿಂದಿನಿಂದಲೂ ಇದೆ. ಆದ್ರೆ ಇದೀಗ ರಷ್ಯಾ, ಯುಕ್ರೇನ್‌ ಯುದ್ಧದಲ್ಲಿ ಮುಳುಗಿ ಹೋಗಿದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡು ಈ ಭಾಗದಲ್ಲಿ ಚೀನಾ ತನ್ನ ಪ್ರಭಾವವನ್ನ ವಿಸ್ತರಿಸೋಕೆ ಟ್ರೈ ಮಾಡ್ತಿದೆ ಅಂತ ವಿಶ್ಲೇಷಿಸಲಾಗ್ತಿದೆ.

-masthmagaa.com

Contact Us for Advertisement

Leave a Reply