ಅಧ್ಯಕ್ಷ ಸ್ಥಾನದಿಂದ ಕೆಳಗಿಳೀತಾರ ಷಿ-ಜಿನ್‌ಪಿಂಗ್‌?

masthmagaa.com:

ಚೀನಾದ ಅಧ್ಯಕ್ಷ ಷಿ-ಜಿನ್‌ಪಿಂಗ್‌ ತಮ್ಮ ಹುದ್ದೆಯಿಂದ ಕೆಳಗಿಳೀತಾರೆ ಅನ್ನೋ ವದಂತಿಗಳು ಈಗ ಚೀನಾದ ಸೋಷಿಯಲ್‌ ಮಿಡೀಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ತಾ ಇವೆ. ಕೋವಿಡ್‌ ಲಾಕ್‌ಡೌನ್‌ಗಳ ಅಸಮರ್ಪಕ ನಿರ್ವಹಣೆ, ಚೀನಾದ ಆರ್ಥಿಕತೆ ಕುಸಿತಾ ಇರೋದ್ರಿಂದ ಷಿ-ಜಿನ್‌ಪಿಂಗ್‌ ಈ ನಿರ್ಧಾರ ತೆಗೆದುಕೊಳ್ಳಬಹುದು ಅಂತ ಹೇಳಲಾಗ್ತಾ ಇದೆ. ಇತ್ತೀಚೆಗೆ ಅವ್ರು ತಮ್ಮ ಪಕ್ಷದ ಪಾಲಿಟ್‌ಬ್ಯೂರೋ ಸ್ಟ್ಯಾಂಡಿಂಗ್‌ ಕಮಿಟಿ ಅಂದ್ರೆ ಕಮ್ಯುನಿಸ್ಟ್‌ ಪಕ್ಷದ ಎಲ್ಲಾ ನಿಲುವುಗಳನ್ನ ತೆಗೆದುಕೊಳ್ಳೋ ಸಮಿತಿಯ ಜೊತೆ ಸಭೆ ನಡೆಸಿದ್ದು ಈ ವದಂತಿಗಳಿಗೆ ಪುಷ್ಠಿ ನೀಡಿದೆ. ಮತ್ತೊಂದ್‌ ಕಡೆ ಈ ವಿಚಾರದ ಬಗ್ಗೆ ಕೆನಡಾದ ಯುಟ್ಯೂಬರ್‌ ಒಬ್ಬ ವಿಡೀಯೋ ಮಾಡಿದ್ದು ಅದು ಕೂಡ ಸಾಕಷ್ಟು ವೈರಲ್‌ ಆಗ್ತಿದೆ ಅಂತ ಹೇಳಲಾಗ್ತಿದೆ. ಈ ವಿಡೀಯೋದಲ್ಲಿ ಈ ವರ್ಷದ ಕೊನೆಯಲ್ಲಿ ಪಾಲಿಟ್‌ ಬ್ಯೂರೋ ಸ್ಟ್ಯಾಂಡಿಗ್‌ ಕಮಿಟಿ ಮತ್ತೆ ಸಭೆ ಸೇರೋವರ್ಗು ಹಾಲಿ ಪ್ರಧಾನಿ ಲಿ ಕೆಕಿಯಾಂಗ್‌ ಜಿನ್‌ಪಿಂಗ್‌ರ ಪರವಾಗಿ ಆಡಳಿತ ನಡೆಸಬಹುದು ಅಂತ ಹೇಳಲಾಗಿದೆ. ಅಂದ್ಹಾಗೆ ಇತ್ತೀಚೆಗೆ ಜಿನ್‌ಪಿಂಗ್‌ಗೆ ಇತ್ತೀಚೆಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಅಂತ ವರದಿಯಾಗಿತ್ತು.

-masthmagaa.com

Contact Us for Advertisement

Leave a Reply