ಭಾರತ-ಚೀನಾ ಯುದ್ಧ ಫಿಕ್ಸ್‌? ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಗಡಿಗೆ ನಿಯೋಜಿಸಿ ಘರ್ಜಿಸಿದ ಭಾರತ!

masthmagaa.com:

ಮಾತುಕತೆ, ಸಭೆ, ಸಂಧಾನ ಎಲ್ಲವೂ ನಡೀತಿದ್ರೂ ಚೀನಾ-ಭಾರತ ನಡುವೆ ಗಡಿ ಉದ್ವಿಗ್ನತೆ ತಣ್ಣಗಾಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಚೀನಾಗೆ ಹೊಂದಿಕೊಂಡಂತೆ ಇರುವ, ಚೀನಾ-ಭಾರತದ ನಡುವೆ ಜಗಳಕ್ಕೆ ಕಾರಣವಾಗಿರೋ, ಅರುಣಾಚಲ ಪ್ರದೇಶದ ಗಡಿಯಲ್ಲೇ ಭಾರತ ಹೈವೋಲ್ಟೆಜ್‌ ಮಿಲಿಟರಿ ಡ್ರಿಲ್ ಮಾಡಿದ್ದು ಉಭಯ ದೇಶಗಳ ಗಡಿ ಪರಿಸ್ಥಿತಿಯ ಕುರಿತು ಈಗ ಮತ್ತೆ ಆತಂಕ ಎದ್ದಿದೆ. ಯಾಕಂದ್ರೆ ಗಲ್ವಾನ್‌ ಗಡಿ ಸಂಘರ್ಷ ಆದ್ಮೇಲೆ ಇಬ್ಬರ ಸಂಬಂಧ ಬೂದಿ ಮುಚ್ಚಿದ ಕೆಂಡದಂತಿದೆ. ಆಗಾಗ ಅದು ಕಿಡಿ ಹೊತ್ತಿ ಉರೀತಾ ಇರುತ್ತೆ. ಕಳೆದ ವರ್ಷ ಕೂಡ ಅರುಣಾಚಲ ಪ್ರದೇಶದಲ್ಲಿ ಜಗಳ ಆಗಿತ್ತು. ಎರಡೂ ಕಡೆಯ ಸೈನಿಕರು ಮಲ್ಲಯುದ್ದ ಮುಷ್ಟಿಯುದ್ದ ಮಾಡಿಕೊಂಡಿದ್ರು. ಆದ್ರೆ ಗುಂಡು ಹಾರಿರಲಿಲ್ಲ. ಆದಾದ ನಂತರ ಭಾರತ ಹಾಗೂ ಚೀನಾ ಮಧ್ಯೆ ಅನೇಕ ಸುತ್ತಿನ ಸೇನಾಧಿಕಾರಿಗಳ ಮಟ್ಟದ ಮಾತುಕತೆ ನಡೆದಿತ್ತು. ಕಳೆದ ವಾರ ಕೂಡ ಚೀನಾ ಹಾಗೂ ಭಾರತದ ರಕ್ಷಣಾ ಸಚಿವರು ಮುಖಾಮುಖಿ ಭೇಟಿಯಾಗಿದ್ರು. ಇಷ್ಟಾದ್ರೂ ಈಗ ಪರಿಸ್ಥಿತಿ ಸರಿ ಹೋಗಿರೋ ರೀತಿ ಕಾಣಿಸ್ತಾ ಇಲ್ಲ. ಗಡಿಯಲ್ಲಿ ಚೀನಾ ಕ್ಯಾತೆ ತೆಗೆಯೋದನ್ನ ನಿಲ್ಲಿಸಿಲ್ಲ ಅನ್ನೋದು ಕನ್ಫಮ್‌ ಆಗಿದೆ. ಆ ವಾದಕ್ಕೆ ಪುಷ್ಟಿ ಕೊಡುವ ಹಾಗೇ ಭಾರತ ಈಗ ಯುದ್ದ ತಯಾರಿಯಲ್ಲಿ ತೊಡಗಿದೆ. ಅದ್ರಲ್ಲೂ ಭಾರತ ನಡೆಸಿರೋ ಈ ಮಿಲಿಟರಿ ಎಕ್ಸಸೈಜ್‌ ಹಿಂದೆಂದಿಗಿಂತಲೂ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಈ ಸಮಾರಾಭ್ಯಾಸಕ್ಕೆ ಭಾರತ ತನ್ನ ಬತ್ತಳಿಕೆಯಲ್ಲಿರೋ ಪ್ರಮುಖ ಅಸ್ತ್ರಗಳನ್ನ ಭಾರಿ ಪ್ರಮಾಣದಲ್ಲಿ ನಿಯೋಜನೆ ಮಾಡಿರೋದು ತಿಳಿದು ಬಂದಿದೆ. ಭಾರತದ ಶಕ್ತಿಶಾಲಿ ರಾಕೆಟ್‌ ಸಿಸ್ಟಂ ಅಂತ ಗುರುತಿಸಿಕೊಂಡಿರೊ ಸ್ವದೇಶಿ ನಿರ್ಮಿತ ಪಿನಾಕ, ಹಾಗೂ ಸ್ಮೆರ್ಚ್‌ ಮಲ್ಟಿ ರಾಕೆಟ್‌ ಸಿಸ್ಟಂ ಕೂಡ ಈ ಸಮಾರಾಭ್ಯಾಸದಲ್ಲಿ ಭಾಗಿಯಾಗಿವೆ. ಅಲ್ದೇ K- 9 Vajra, ಸಾರಂಗ್‌, ಧನುಷ್‌, 155 mm Bofors howitzer, 105 mm field gun ಹಾಗೂ 120 mm mortar ಅಸ್ತ್ರಗಳೂ ಭಾಗಿಯಾಗಿವೆ. ಸಾಮಾನ್ಯವಾಗಿ ಪಾಕಿಸ್ತಾನದ ಗಡಿಯಲ್ಲಿ ಭಾರತ ಈ ರೀತಿ ಸಮಾರಾಭ್ಯಾಸ ಮಾಡೋದುಂಟು. ಆದ್ರೆ ಚೀನಾದ ಗಡಿಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ, ಈ ರೀತಿಯ ಬಲಿಷ್ಠ ಅಸ್ತ್ರಗಳನ್ನ ಭಾರತ ಇಳಿಸೋದಿಲ್ಲ. ಅದಕ್ಕೆ ಕಾರಣ, ಇಬ್ರ ಮಧ್ಯೆ ಮಿಸ್‌ ಅಂಡರ್‌ಸ್ಟಾಂಡಿಂಗ್‌ ಆಗಬಾರದು. ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು, ಕಂಟ್ರೋಲ್‌ನಲ್ಲಿ ಇದ್ರೆ ಇಬ್ರಿಗೂ ಒಳ್ಳೇದು ಅಂತ. ಆದ್ರೆ ಈಗ ಭಾರತ ತನ್ನ ಸ್ಟಾಟಜಿಯನ್ನ ಬದಲಾಯಿಸಿದೆ. ಭಾರತ ಕೂಡ ಶಕ್ತಿಶಾಲಿ ಆಯುಧಗಳನ್ನ ಚೀನಾ ಗಡಿಯಲ್ಲಿ ನಿಯೋಜಿಸಿ ಯುದ್ದಭ್ಯಾಸ ಮಾಡಿ ಶಕ್ತಿ ಪ್ರದರ್ಶನ ಮಾಡಿದೆ. ಇನ್ನು ಈ ಸಮಾರಾಭ್ಯಾಸಕ್ಕೆ Buland Bharat ಎಕ್ಸಸೈಜ್‌ ಅಂತ ಹೆಸರಿಡಲಾಗಿದೆ. ಸ್ಪೆಷಲ್‌ ಫೋರ್ಸ್‌, aviation wing ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಇದ್ರಲ್ಲಿ ಭಾಗಿಯಾಗಿವೆ. ಅರುಣಾಚಲ ಪ್ರದೇಶದ ತವಾಂಗ್‌ ಹಾಗೂ ವೆಸ್ಟ್‌ ಕೆಮಿಂಗ್‌ ಪ್ರದೇಶದಲ್ಲಿ ಇದನ್ನ ನಡೆಸಲಾಗಿದೆ. ಗಮನಿಸಬೇಕಾದ ಅಂಶ ಅಂದ್ರೆ ಕಳೆದ ಬಾರಿ ಇದೇ ತವಾಂಗ್‌ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಮಾರಾಮಾರಿ ಆಗಿತ್ತು. ಅದೇ ಜಾಗದಲ್ಲಿ ಭಾರತ ಈ ಭಯಾನಕ ಅಸ್ತ್ರಗಳನ್ನ ಬಳಸಿ ಸಮಾರಾಭ್ಯಾಸ ಮಾಡ್ತಾ ಚೀನಾಗೆ ದೊಡ್ಡ ಸಂದೇಶ ಕೊಟ್ಟಿದೆ. ಈ ಕಡೆ ಭಾರತದ ಹೊರಗೂ ಚೀನಾಗೆ ಪ್ರತಿಯಾಗಿ ಭಾರತ ಕೂಡ ದೊಡ್ಡ ತಂತ್ರ ಹೆಣೀತಾ ಇದೆ. ಇದರ ಭಾಗವಾಗಿ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾಲ್ಡೀವ್ಸ್‌ಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಚೀನಾವನ್ನ ಗಮನದಲ್ಲಿಟ್ಟುಕೊಂಡು ರಕ್ಷಣಾ ಸಹಭಾಗಿತ್ವವನ್ನ ವೃದ್ದಿಸಿಕೊಳ್ಳೋದಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿವೆ. ಹಿಂದೂ ಮಹಾಸಾಗರದಲ್ಲಿ ಭಾರತವನ್ನ ಗುರಿಯಾಗಿಸಿಕೊಂಡು ಚೀನಾ ತನ್ನ ಪ್ರಾಬಲ್ಯವನ್ನ ಹೆಚ್ಚಿಸಿಕೊಳ್ತಿದ್ದು ಈ ನಿಟ್ಟಿನಲ್ಲಿ ಮಾಲ್ಡೀವ್ಸ್‌, ಶ್ರೀಲಂಕಾ ಸೇರಿ ಅನೇಕ ದೇಶಗಳ ಜೊತೆಗೆ ಚೀನಾ ಗಾಢ ಸಂಬಂಧ ಬೆಳೆಸ್ತಿದೆ. ಅದ್ರಲ್ಲೂ ಮುಸ್ಲಿಂ ಮೆಜಾರಟಿ ಕಂಟ್ರಿಯಾಗಿರೋ ಮಾಲ್ಡೀವ್ಸ್‌ನಲ್ಲಿ ಸೈದ್ದಾಂತಿಕವಾಗಿ ಹಾಗೂ ರಾಜಕೀಯವಾಗಿ ಭಾರತದ ವಿರುದ್ದ ಚೀನಾ ಅಪಪ್ರಚಾರ ಮಾಡ್ತಿದೆ. ಹೀಗಾಗಿನೇ ಮಾಲ್ಡೀವ್ಸ್‌ನಲ್ಲಿ ಆಗಾಗ ಭಾರತ ವಿರೋಧಿ ಚೀನಾ ಪರ ಮೆರವಣಿಗೆ ಘೋಷಣೆಗಳು ಆಗ್ತಾ ಇರ್ತವೆ. ಈ ಹೊತ್ತಲ್ಲೇ ಮಾಲ್ಡೀವ್ಸ್‌ಗೆ ಭಾರತದ ರಕ್ಷಣಾ ಸಚಿವರು ಭೇಟಿ ಕೊಟ್ಟು ಮಾತುಕತೆ ಮಾಡಿರೋದು ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply