ಅಮಿತ್‌ ಶಾ ಆಕ್ಷನ್:‌‌ ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್‌ ಬ್ಯಾನ್

masthmagaa.com:

ಇನ್ನೊಂದ್ಕಡೆಯಿಂದ ಇದೀಗ ಭಯೋತ್ಪಾದನಾ ಚಟುವಟಿಕೆಗಳಿಗೆ ಸಪೋರ್ಟ್‌ ಮಾಡೋ ಮುಸ್ಲಿಂ ಲೀಗ್‌ ಜಮ್ಮು ಕಾಶ್ಮೀರ್ (ಮಸರತ್‌ ಆಲಂ ಗ್ರೂಪ್‌) ಅಥ್ವಾ MLJK-MA ಸಂಘಟನೆಯನ್ನ ಬ್ಯಾನ್‌ ಮಾಡಲಾಗಿದೆ. ಜಮ್ಮು & ಕಾಶ್ಮೀರದಲ್ಲಿ ಈ ಗುಂಪು ರಾಷ್ಟ್ರವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ಇನ್ವಾಲ್ವ್‌ ಆಗಿದೆ ಅಂತ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಅಲ್ಲದೆ ಈ ಗುಂಪು ಜಮ್ಮು ಕಾಶ್ಮೀರಕ್ಕೆ ಭಾರತದಿಂದ ಸ್ವತಂತ್ರಗೊಳಿಸಿ ಹೊಸ ಇಸ್ಲಾಮಿಕ್‌ ದೇಶವನ್ನ ರೂಪಿಸೋಕೆ ಕುಮ್ಮಕ್ಕು ನೀಡ್ತಿತ್ತು ಅಂದಿದ್ದಾರೆ. ಅಂದ್ಹಾಗೆ ಮಸರತ್‌ ಆಲಂ ಭಾಟ್‌ ಅನ್ನೋನು MLJK-MAನ ಚೇರ್‌ಮ್ಯಾನ್‌ ಆಗಿದ್ದ. 2010ರ ಟೈಮಲ್ಲಿ ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲುತೂರಾಟ ಅಭಿಯಾನದ ರುವಾರಿಗಳ ಪಾಳಯದಲ್ಲಿ ಗುರುತಿಸಿಕೊಂಡಿದ್ದ. ಅಲ್ಲದೆ ಪ್ರತ್ಯೇಕತಾವಾದಿ ಸಂಘಟನೆಗಳಾದ ಕಾಶ್ಮೀರ್‌ ಹುರಿಯತ್‌ ಕಾನ್ಫರೆನ್ಸ್‌ನ ಗಿಲಾನಿ ದಳದ ಚೇರ್‌ಮನ್‌ ಕೂಡ ಆಗಿದ್ದ. ಈತನ ಮೇಲೆ 27ಕ್ಕೂ ಹೆಚ್ಚು ಕ್ರಿಮಿನಲ್‌ ಕೇಸ್‌ಗಳಿದ್ವು. ಆದ್ರೆ ಒಮ್ಮೆ 2015ರಲ್ಲಿ ಮುಫ್ತಿ ಮೊಹಮದ್‌ ಸಯೀದ್‌ ಜಮ್ಮು ಕಾಶ್ಮೀರ ಸಿಎಂ ಆಗಿದ್ದಾಗ ಈ ಮಸ್ರತ್‌ ಆಲಂ ದೋಷಮುಕ್ತ ಅಂತ ಖುಲಾಸೆಗೊಳಿಸಿದ್ರು. ಈತನನ್ನ ಉಗ್ರ ಸಂಘಟನೆ ಐಸಿಸ್‌ನ ಹೊಸ ಪೊಸ್ಟರ್‌ ಬಾಯ್‌ ಅಂತಾನೂ ಕರೀತಿದ್ರು ಎನ್ನಲಾಗ್ತಿದೆ. ಸಧ್ಯ ಈತ 2019ರಿಂದ ದೆಹಲಿಯ ತಿಹಾರ್‌ ಜೈಲಲ್ಲಿದ್ದಾನೆ.

-masthmagaa.com

Contact Us for Advertisement

Leave a Reply