ರಾಜ್ಯದಲ್ಲಿ ಅಮಿತ್‌ ಶಾ: ರಾಜ್ಯ ನಾಯಕರಿಗೆ ಬಿಸಿ ಮುಟ್ಟಿಸಿದ ಬಿಜೆಪಿ ಚಾಣಕ್ಯ!

masthmagaa.com:

ರಾಜ್ಯಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗಮನದ ಬೆನ್ನಲ್ಲೇ ಈಗ ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ರಾಜ್ಯಕ್ಕೆ ಬಂದಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ ನಾಯಕರ ಜೊತೆಗೆ ಸಭೆ ಮಾಡಿ, ಸದ್ಯದ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಮಾತುಕತೆ ನಡೆದಿರುವ ಸಾಧ್ಯತೆ ಇದೆ. ಇನ್ನು ಸಭೆ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ದ ಅಮಿತ್‌ ಶಾ ಗರಂ ಆಗಿದ್ದಾರೆ ಅಂತ ಹೇಳಲಾಗ್ತಿದೆ. ರಾಜ್ಯದಲ್ಲಿ ನಡೆದ ಪ್ರವೀಣ್‌ ನೆಟ್ಟಾರ್‌ ಹತ್ಯೆ ಹಾಗೂ ಅದನ್ನ ವಿರೋಧಿಸಿ ಬಿಜೆಪಿ ಕಾರ್ಯಕರ್ತರ ರಾಜೀನಾಮೆಗೆ ಸಂಬಂಧಿಸಿದಂತೆ ಬೊಮ್ಮಾಯಿಗೆ ವಾರ್ನಿಂಗ್‌ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಅಲ್ದೇ ಕಾರ್ಯಕರ್ತರೇ ನಮಗೆ ಜೀವಾಳ, ಇಂತಹ ಪ್ರಕರಣಗಳು ಇನ್ನು ಪುನಾರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಅಂತ ಖಡಕ್‌ ಸೂಚನೆ ಕೊಟ್ಟಿದ್ದಾರೆ. ಇನ್ನು ಮಾಜಿ ಸಿಎಂ ಯಡಿಯೂರಪ್ಪರ ಜೊತೆಗೂ ಅಮಿತ್‌ ಶಾ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಸರ್ಕಾರದಿಂದ ಆಯೋಜನೆಗೊಂಡಿದ್ದ ʻಸಂಕಲ್ಪ್ ಸೆ ಸಿದ್ಧಿʼ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಭಾಗವಹಿಸಿದ್ರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ರು. ಈ ವೇಳೆ ಮಾತನಾಡಿದ ಅಮಿತ್‌ ಶಾ ʻಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಮೂಲಕ ಭಾರತದ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದಿನ 25 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ನಕ್ಷೆ ಸಿದ್ದಪಡಿಸಿಕೊಂಡಿದ್ದೇವೆ ಅಂತ ಹೇಳಿದ್ರು. ಇನ್ನು ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಕಿದ್ದ ಬ್ಯಾನರ್‌ನಲ್ಲಿ ಕನ್ನಡ ಅಕ್ಷರವೇ ಇರಲಿಲ್ಲ,ಕಾರ್ಯಕ್ರಮ ಬರೀ ಹಿಂದಿಮಯವಾಗಿದೆ ಅಂತ ಆರೋಪಿಸಿ ಜನ ಸೋಷಿಯಲ್‌ ಮಿಡಿಯಾದಲ್ಲಿ ಟೀಕೆ ವ್ಯಕ್ತಪಡಿಸ್ತಿದ್ದಾರೆ. ಇನ್ನು ನಿನ್ನೆ ಸಿದ್ದರಾಮೋತ್ಸವಕ್ಕೆ ಕಾಲೆಳೆದಿದ್ದ ಬಿಜೆಪಿಗೆ ಇಂದು ರಾಜ್ಯ ಕಾಂಗ್ರೆಸ್‌ ತಿರುಗೇಟು ಕೊಟ್ಟಿದೆ. ʻಸಿಎಂಗೆ ಸಮರ್ಪಕ ಮಾಹಿತಿಯೇ ಇಲ್ಲದೆ ಕಾರ್ಯಕರ್ತರ ಆಕ್ರೋಶ ತಣಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಧಿಡೀರ್ ಭೇಟಿ ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ ಆತಂಕೋತ್ಸವ, ಅಂತ್ಯೋತ್ಸವ, ಆಕ್ರೋಶೋತ್ಸವಗಳು ನಡೆಯುತ್ತಿರುವುದಕ್ಕೆ ನಿದರ್ಶನ. ಅಮಿತ್‌ ಶಾ ಭೇಟಿ ಕೊಟ್ಟಿರೋದಕ್ಕೆ ಸಿಎಂ ಸಪ್ಪೆ ಮುಖ ಹಾಕಿರೋದ್ರ ರಹಸ್ಯವೇನು ಅಂತ ಕಾಲೆಳೆದಿದೆ.

-masthmagaa.com

Contact Us for Advertisement

Leave a Reply