ʻಗಡಿ ಭದ್ರತಾ ವಿಚಾರದಲ್ಲಿ ರಾಜಿ ಆಗಲ್ಲʼ: ಅಮಿತ್‌ ಶಾ

masthmagaa.com:

ದೆಹಲಿಯಲ್ಲಿ ಫೆಬ್ರುವರಿ 05 ರಂದು `ORF ಫಾರೀನ್‌ ಪಾಲಿಸಿ ಸರ್ವೇʼ ಲಾಂಚ್‌ ಮಾಡಿದ ಗೃಹ ಸಚಿವ ಅಮಿತ್‌ ಶಾ ಭಾರತದ ಗಡಿ ಭದ್ರತೆಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ. ʻನಮ್ಮ ಆಂತರಿಕ ಹಾಗೂ ವಿದೇಶಾಂಗ ನೀತಿಗಳು ಕ್ಲಿಯರ್ರಾಗಿವೆ. ನಾವು ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧ ಬಯಸ್ತೀವಿ. ಆದ್ರೆ ದೇಶದ ಗಡಿ ಭದ್ರತೆ ಮತ್ತು ಜನರ ರಕ್ಷಣೆ ವಿಚಾರದಲ್ಲಿ ಮಾತ್ರ ಯಾವ್ದೇ ರೀತಿ ಕಾಂಪ್ರಮೈಸ್‌ ಆಗಲ್ಲʼ ಅಂತ ಹೇಳಿದ್ದಾರೆ. ಇನ್ನು ಜಮ್ಮು ಕಾಶ್ಮೀರ್‌ ಆರ್ಟಿಕಲ್‌ 370, 35A ಬ್ಯಾನ್‌ ಮಾಡಿದ್ದನ್ನ ಸಮರ್ಥಿಸಿಕೊಂಡ ಅಮಿತ್‌ ಶಾ, ಈ ಆರ್ಟಿಕಲ್‌ಗಳು ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತೆಯನ್ನ ಉತ್ತೇಜನ ಮಾಡ್ತಿದ್ವು. ಈಗ ಅಲ್ಲಿನ ಜನರಿಗೆ ಸಾಂವಿಧಾನಿಕ ಹಕ್ಕುಗಳು ಸಿಕ್ಕಿವೆ. 20 ಸಾವಿರಕ್ಕೂ ಹೆಚ್ಚು ಪ್ರಾದೇಶಿಕ ಪ್ರತಿನಿಧಿಗಳಿದ್ದಾರೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply