ಪಾಕ್‌ ಉಗ್ರರ ಹತ್ಯೆ: ಇಂಟಲಿಜೆನ್ಸಿ ಅದ್ರ ಕೆಲ್ಸ ಅದು ಮಾಡ್ತಿದೆ ಅಂದ ಶಾ!

masthmagaa.com:

ಪಾಕ್‌ನಲ್ಲಿ ಭಾರತ ವಿರೋಧಿ ಉಗ್ರರ ಹತ್ಯೆಗಳ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಂಟ್ರಸ್ಟಿಂಗ್‌ ಹೇಳಿಕೆ ಕೊಟ್ಟಿದ್ದಾರೆ. ʻಏಜೆನ್ಸಿಗಳು ಅದ್ರ ಪಾಡಿಗೆ ಅದು ಕೆಲಸ ಮಾಡ್ತಿರೋವಾಗ ನಾವು ತಲೆ ಹಾಕ್ಬಾರ್ದುʼ ಅಂತೇಳಿದ್ದಾರೆ. ಈ ಮೂಲಕ ಪಾಕಿಸ್ತಾನದ ಟಾರ್ಗೆಟ್‌ ಕಿಲ್ಲಿಂಗ್‌ ವಿಚಾರದಲ್ಲಿ ʻಯಾವುದೋʼ ಏಜೆನ್ಸಿ ಕೈವಾಡ ಇದೆ ಅನ್ನೋದನ್ನ ಅಮಿತ್‌ ಶಾ ಬಹಿರಂಗ ಮಾಡಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು, 2019ರ ನಂತ್ರ ಭಾರತ ಪಾಕಿಸ್ತಾನದಲ್ಲಿ ಉಗ್ರರನ್ನ ಹೊಡೀತಾ ಇದೆ ಅಂತ ʻದಿ ಗಾರ್ಡಿಯನ್‌ʼ ಪತ್ರಿಕೆ ವರದಿ ಮಾಡಿದ್ದರ ಬಗ್ಗೆ ಪ್ರಶ್ನಿಸಲಾಗಿತ್ತು. ಇದಕ್ಕೆ ರಿಯಾಕ್ಟ್‌ ಮಾಡಿದ ಅಮಿತ್‌ ಶಾ ಅವರು, ʻಇದು ‍ಒಳ್ಳೆಯ ಕೆಲ್ಸ. ಯಾರೇ ಹೊಡೆದುರುಳಿಸಿದ್ರೂ ತಪ್ಪೇನು? ಏನಾದ್ರೂ ಸಮಸ್ಯೆ ಆಗಿದೆಯಾ? ಏಜೆನ್ಸಿ ಅದ್ರ ಪಾಡಿಗೆ ಅದ್ರ ಕೆಲ್ಸ ಮಾಡ್ತಿದೆ. ನಾವ್‌ ಅದ್ರಲ್ಲಿ ಏಕೆ ತಲೆ ಹಾಕ್ಬೇಕು? ಅಂತ ಕೇಳಿದ್ದಾರೆ. ಅಲ್ದೇ ಚುನಾವಣೆ ಸಂದರ್ಶನ ಮಾಡ್ತಿರೊ ಸಂದರ್ಶಕರಿಗೆ ಇದ್ರಿಂದ ನಿಮಗೇನಾದ್ರೂ ತೊಂದರೆಯಾಗಿದೆಯಾ? ಅಂತ ಶಾ ಪ್ರಶ್ನಿಸಿದ್ದಾರೆ. ಈ ವೇಳೆ ಸಂದರ್ಶನಕಾರರು ʻಇಲ್ಲ..ಇದು ಒ‍ಳ್ಳೆ ಕೆಲ್ಸʼ ಅಂದಾಗ, ʻಕಾಂಗ್ರೆಸ್‌ನವರಿಗೂ ಸ್ವಲ್ಪ ಇದ್ರ ಬಗ್ಗೆ ತಿಳಿಸಿ ಹೇಳಿʼ ಅಂತ ಶಾ ಕಾಲೆಳೆದಿದ್ದಾರೆ.

-masthmagaa.com

Contact Us for Advertisement

Leave a Reply