ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡ ಬಿಗ್‌ ಬಿ!

masthmagaa.com:

ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವ್ರು ಶೂಟಿಂಗ್‌ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ʻಪ್ರಾಜೆಕ್ಟ್‌ ಕೆʼ ಚಿತ್ರದ ಶೂಟಿಂಗ್‌ ವೇಳೆ ಬಿದ್ದು ಪಕ್ಕೆಲುಬಿಗೆ ಗಾಯವಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರೊ ಬಿಗ್‌ ಬಿ, ʻಸಿನಿಮಾ ಚಿತ್ರೀಕರಣದಲ್ಲಿ ಆಖ್ಷನ್‌ ಸೀನ್‌ ಚಿತ್ರಿಸುವ ಸಮಯದಲ್ಲಿ ನನಗೆ ಗಾಯವಾಗಿದೆ. ಪಕ್ಕೆಲುಬು ಮುರಿದಿದೆ. ಹೈದರಾಬಾದ್‌ನ AIJ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ ಮಾಡಿಸಿಕೊಂಡು ಮನೆಗೆ ಮರಳಿರುವೆ. ನೋವಾಗ್ತಿದೆ, ಚೇತರಿಕೆಗೆ ಕೆಲ ದಿನಗಳು ಬೇಕುʼ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಹಿಂದೆ 2 ಸಲ ಕೋವಿಡ್‌ ತುತ್ತಾಗಿದ್ದ ಬಿಗ್‌ ಬಿ, ದೇಹದ ಕೆಲವೊಂದು ಅಂಗಾಂಗಗಳು ವೈಫಲ್ಯವಾಗಿದ್ದವು ಅಂತ ಹೇಳಿಕೊಂಡಿದ್ರು.

-masthmagaa.com

Contact Us for Advertisement

Leave a Reply