ಅಮೆರಿಕ ಯುಕ್ರೇನ್‌ಗೆ ನೀಡಿರುವ ಕ್ಲಸ್ಟರ್‌ ಬಾಂಬ್‌ದ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಲ್ಲ: ರಷ್ಯಾ

masthmagaa.com:

ರಷ್ಯಾ- ಯುಕ್ರೇನ್‌ ಯುದ್ಧ 500 ದಿನ ಪೂರೈಸಿ, ಮುಂದುವರೆದಿದೆ. ಈ ಯುದ್ಧದಲ್ಲಿ ರಷ್ಯಾ ದಾಳಿಗೆ ಪ್ರತಿದಾಳಿ ಮಾಡಲು ಯುಕ್ರೇನ್‌ಗೆ ಅಮೆರಿಕ ತನ್ನ ವಿವಾದಾತ್ಮಕ ಕ್ಲಸ್ಟರ್‌ ಸ್ಫೋಟಕಗಳನ್ನ ಕೊಡೋಕೆ ನಿನ್ನೆ ಒಪ್ಪಿಗೆ ನೀಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಷ್ಯಾ ಪ್ರತಿಕ್ರಿಯೆ ನೀಡಿದ್ದು, ಅಮೆರಿಕದ ಈ ನಿರ್ಧಾರ ನಿರಾಸೆ ಅಥ್ವಾ ಹತಾಶೆಯನ್ನ ತೋರಿಸುತ್ತೆ ಹಾಗೂ ರಷ್ಯಾ ಮೇಲೆ ಯಾವುದೇ ಪರಿಣಾಮ ಬೀರಲ್ಲ ಅಂತ ಹೇಳಿದೆ. ಜೊತೆಗೆ ಯುಕ್ರೇನ್‌ ಪ್ರತಿದಾಳಿ ವಿಫಲವಾಗಿರೋ ಕಾರಣ ಅಮೆರಿಕ ತನ್ನ ಫೈನಲ್‌ ಅಸ್ತ್ರವನ್ನ ಯುಕ್ರೇನ್‌ಗೆ ನೀಡಿದೆ. ಆದ್ರೆ ಇದ್ರಿಂದ ಆಗೋ ಗಂಭೀರ ಪರಿಣಾಮವನ್ನ ಅಮೆರಿಕ ಯೋಚನೆ ಮಾಡಿಲ್ಲ. ಆದ್ರೂ ಇದ್ಯಾವ್ದು ರಷ್ಯಾದ ಮಿಲಿಟರಿ ಕಾರ್ಯಾಚರಣೆ ಮೇಲೆ ಎಫೆಕ್ಟ್‌ ಆಗಲ್ಲ ಅಂತ ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಖರೋವಾ ಅವ್ರು ಹೇಳಿದ್ದಾರೆ. ಇನ್ನೊಂದ್‌ ಕಡೆ ಯುಕ್ರೇನ್‌ಗೆ ಕ್ಲಸ್ಟರ್‌ ಸ್ಫೋಟಕ ಕೊಡುವ ಅಮೆರಿಕ ನಿರ್ಧಾರವನ್ನ ಜರ್ಮನಿ ವಿರೋಧಿಸಿದೆ.

-masthmagaa.com

Contact Us for Advertisement

Leave a Reply