ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನ ಮದುವೆ ಮಾಡಿಕೊಂಡ ಆಂಧ್ರ ಟೀಚರ್‌ ಬಂಧನ!

masthmagaa.com:

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನ ಸ್ಕೂಲ್‌ ಟೀಚರ್‌ ಮದುವೆ ಆಗಿ ಪೊಲೀಸ್‌ ಕೈಯಲ್ಲಿ ಅರೆಸ್ಟ್‌ ಆಗಿರೋ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಗೋದಾವರಿ ಜಿಲ್ಲೆಯ ಪರಿಷದ್‌ ಹೈಸ್ಕೂಲ್‌ ಟೀಚರ್‌ ಕೆ. ಸೋಮರಾಜು ಅನ್ನೋರು 15 ವರ್ಷದ ವಿದ್ಯಾರ್ಥಿನಿಗೆ ಸ್ಮಾರ್ಟ್‌ಫೋನ್‌ ಕೊಟ್ಟು, ಪ್ರೀತಿಸೋದಾಗಿ ಆಸೆ ತೋರ್ಸಿ ನವೆಂಬರ್‌ 19ರಂದು ಮದುವೆ ಮಾಡಿಕೊಂಡಿದ್ದ. ಮದುವೆ ಮಾಡಿಕೊಂಡ ಬಳಿಕ ವಿದ್ಯಾರ್ಥಿನಿಯನ್ನ ಹಲವು ದಿನಗಳ ಕಾಲ ಬಲವಂತವಾಗಿ ತನ್ನ ಬಳಿಯೇ ಇರಿಸಿಕೊಂಡಿದ್ದ. ಆದ್ರೆ ಅದ್ಹೇಗೋ ವಿದ್ಯಾರ್ಥಿನಿ ಆತನಿಂದ ತಪ್ಪಿಸಿಕೊಂಡು ಮನೆ ಸೇರಿ, ನಡೆದ ಘಟನೆಯನ್ನ ತನ್ನ ಫ್ಯಾಮಿಲಿಗೆ ವಿವರಿಸಿದ್ದಾಳೆ. ಬಳಿಕ ವಿದ್ಯಾರ್ಥಿನಿ ಮತ್ತು ಆಕೆಯ ತಂದೆ ಶಿಕ್ಷಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಈಗ ಶಿಕ್ಷಕ ಪೊಲೀಸರ ಅತಿಥಿಯಾಗಿದ್ದಾನೆ.

-masthmagaa.com

Contact Us for Advertisement

Leave a Reply