ಜಸ್ಟಿನ್ ಟ್ರುಡುಗೆ ಛೀಮಾರಿ ಹಾಕಿದ ಕೆನಡಾ ಪ್ರಜೆ! ಹೇಳಿದ್ದೇನು?

masthmagaa.com:

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಅವ್ರಿಗೆ ಅಲ್ಲಿನ ವ್ಯಕ್ತಿಯೊಬ್ಬರು ನೇರಾನೇರ ತರಾಟೆಗೆ ತಗೊಂಡಿದ್ದಾರೆ. ಟೊರೊಂಟೋದ ರಸ್ತೆಯಲ್ಲಿ ಟ್ರುಡು ತೆರಳುವಾಗ ಅಲ್ಲಿನ ಜನರತ್ತ ಕೈಬೀಸುತ್ತಾ..ಗ್ರೀಟ್‌ ಮಾಡುತ್ತಾ ಹೋಗಿದ್ರು. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ನಾನು ನಿಮಗೆ ಶೇಕ್‌ ಹ್ಯಾಂಡ್‌ ಮಾಡೋದಿಲ್ಲ. ನೀನೊಬ್ಬ ವೇಸ್ಟ್‌ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಿಯಾಕ್ಟ್‌ ಮಾಡಿರುವ ಟ್ರುಡು ವ್ಯಕ್ತಿಯ ಕೋಪಕ್ಕೆ ಕಾರಣವೇನು ಅಂತ ಕೇಳಿದ್ದಾರೆ. ಆಗ ಆ ವ್ಯಕ್ತಿ ನೀವು ಇಡೀ ಕೆನಡಾವನ್ನ ಹಾಳು ಮಾಡಿದ್ದೀರ ಅಂತ ಆರೋಪಿಸಿದ್ದಾರೆ. ಅದೇ ಟೈಮ್‌ನಲ್ಲಿ ಮತ್ತೆ ಪ್ರಶ್ನೆ ಮಾಡಿರುವ ಟ್ರುಡು, ನಾನೇಗೆ ದೇಶವನ್ನ ಹಾಳು ಮಾಡಿದೆ ಅಂತ ಕೇಳಿದ್ದಾರೆ. ಇದಕ್ಕೆ ವ್ಯಕ್ತಿ ಉತ್ತರಿಸಿದ್ದು, ಕೆನಡಾದಲ್ಲಿ ಯಾರಾದ್ರೂ ಮನೆಯನ್ನ ಕೈಗೆಟುಕೋ ದರದಲ್ಲಿ ಕೊಂಡುಕೊ‍ಳ್ಳಲು ಸಾಧ್ಯವಾಗ್ತಿದ್ಯಾ? ಕಾರ್ಬನ್‌ ಟ್ಯಾಕ್ಸ್‌ ಅಂತ ಬೇರೆ ಜನರ ಮೇಲೆ ತೆರಿಗೆ ಹಾಕ್ತೀದ್ದೀರ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ರುಡು ಮತ್ತು ವ್ಯಕ್ತಿಯ ನಡುವಿನ ಸಂಭಾಷಣೆಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply