ನಾವು ಮತ ಹಾಕಬೇಕು, ಗುಲಾಮರಾಗಿರೋಕೆ ಆಗಲ್ಲ: ಚೀನಾ ಪ್ರಜೆಗಳಿಂದ ಆಗ್ರಹ

masthmagaa.com:

ಮೂರನೇ ಬಾರಿಯೂ ಚೀನಾದಲ್ಲಿ ತಮ್ಮ ಸರ್ವಾಧಿಕಾರವನ್ನ ಮುಂದುವರೆಸೋಕೆ ಹೊರಟಿರೊ ಷಿ ಜಿನ್‌ಪಿಂಗ್‌ ವಿರುದ್ದ ಪ್ರತಿಭಟನೆಗಳು ಜಾಸ್ತಿಯಾಗ್ತಿವೆ. ಕಮ್ಯುನಿಸ್ಟ್‌ ಪಕ್ಷದ 20ನೇ ಪಂಚವಾರ್ಷಿಕ ಸಭೆಯ ಫಲಿತಾಂಶ ಬರೋಕೆ ಮುನ್ನವೇ ಚೀನಾ ಪ್ರಜೆಗಳು ಜಿನ್‌ಪಿಂಗ್‌ ವಿರುದ್ದ ತಮ್ಮ ಅಸಮಾದಾನವನ್ನ ಹೊರಹಾಕ್ತಿದಾರೆ. ಅವರ ಸರ್ವಾಧಿಕಾರತ್ವ ಹಾಗೂ ಜೀರೊ ಕೋವಿಡ್‌ ಪಾಲಿಸಿಗಳಿಂದ ಬೇಸತ್ತು ಹೋಗಿರೊ ಜನ ಲಾಕ್‌ಡೌನ್‌ಗಳನ್ನ ಅಂತ್ಯಗೊಳಿಸಿ ಅಂತ ಆಗ್ರಹಿಸಿದ್ದಾರೆ. ನಾವು ಮತ ಹಾಕಬೇಕು, ಗುಲಾಮರಾಗಿರೋಕೆ ಆಗಲ್ಲ ಅಂತ ಹೇಳಿದ್ದಾರೆ. ಇನ್ನು ಸರ್ಕಾರ ಮಾತ್ರ ಇದ್ಯಾವುದಕ್ಕೂ ತಲೆ ಕೆಡಸಿಕೊಳ್ತಿಲ್ಲ. ಸಭೆ ಯಾವುದೇ ತೊಂದರೆಯಿಲ್ದೇ ನಡಿಬೇಕು ಅಂತ ಬೀಜಿಂಗ್‌ ಸುತ್ತ ಸರ್ಪಗಾವಲು ಹಾಕಿದೆ. 100 ಅಡಿ ಅಂತರದಲ್ಲಿ ಒಬ್ಬರು ಭದ್ರತಾ ಪಡೆ ಅಥವಾ ಸ್ವಯಂಸೇವಕರನ್ನ ನಿಯೋಜಿಸಲಾಗಿದೆ.

-masthmagaa.com

Contact Us for Advertisement

Leave a Reply